ಪ್ರತಿ ಪದವಿ ವಿದ್ಯಾಲಯದಲ್ಲಿ ಕೌಶಲ್ಯ ತರಬೇತಿ ವಿಷಯ ಕಡ್ಡಾಯಗೊಳಿಸಿ

ಪ್ರತಿ ಪದವಿ ವಿದ್ಯಾಲಯದಲ್ಲಿ ಕೌಶಲ್ಯ ತರಬೇತಿ ವಿಷಯ ಕಡ್ಡಾಯಗೊಳಿಸಿ

ರಾಣೇಬೆನ್ನೂರಿನ ಶಾಸಕ ಪ್ರಕಾಶ ಕೋಳಿವಾಡ ಒತ್ತಾಯ

ರಾಣೇಬೆನ್ನೂರು, ಜು. 24- ಬೇಸಿಕ್ ಕಂಪ್ಯೂಟರ್ ಶಿಕ್ಷಣದ ಜೊತೆಗೆ ಕೌಶಲ್ಯ ತರಬೇತಿ ಕೊರತೆಯಿಂದ ಉದ್ಯೋಗ ದೊರೆಯುತ್ತಿಲ್ಲ. 2 ಸಾವಿರ ಹುದ್ದೆಗಳಿಗೆ 200 ಆಕಾಂಕ್ಷಿಗಳು ಉದ್ಯೋಗ ಪಡೆಯಲಿದ್ದಾರೆ. ಇದರಿಂದಾಗಿ ಪದವೀಧರರಾದರೂ ನಿರುದ್ಯೋಗಿಗಳಾ ಗುತ್ತಾರೆ. ಕಾರಣ, ಪ್ರತಿ ಪದವಿ ವಿದ್ಯಾಲಯದಲ್ಲಿ ಕೌಶಲ್ಯ ತರಬೇತಿ ವಿಷಯ ಕಡ್ಡಾಯಗೊಳಿಸಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಅವರು ಉಪ ಸಭಾಪತಿ ರುದ್ರಪ್ಪ ಲಮಾಣಿ ಅವರಿಗೆ ಒತ್ತಾಯಿಸಿದರು.

ಅವರು ಇಲ್ಲಿನ ಬಿಎಜೆಎಸ್‌ಎಸ್ ಮಹಾವಿದ್ಯಾಲ ಯದಲ್ಲಿ ಉಪ ಸಭಾಪತಿ ರುದ್ರಪ್ಪ ಮತ್ತು ತಮಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಿ ದ್ದರು. 25 ವರ್ಷಗಳು ಗತಿಸಿದರೂ ಈ ಕಾಲೇಜಿಗೆ ಸರ್ಕಾರದ ಅನುದಾನದ ಬರದಿರುವುದನ್ನು ಪ್ರಸ್ತಾಪಿಸಿ ಮಾತನಾಡಿದ ಶಾಸಕ ಪ್ರಕಾಶ ಕೋಳಿವಾಡ ಅವರು, ತಮಗೆ ರಾಜಕೀಯ ಕ್ಷೇತ್ರದಲ್ಲಿ ಬೆಳೆಯಲು ಸಹಕಾರ ನೀಡಿದ ಈ ಸಂಸ್ಥೆಯ ಎಲ್ಲಾ ಕಾರ್ಯಗಳಿಗೆ ಸಹಾಯ ಸಲ್ಲಿಸುವಂತೆ ರುದ್ರಪ್ಪ ಅವರು ಮನವಿ ಮಾಡಿದರು.

ಡಾ. ಆರ್.ಎಂ. ಕುಬೇರಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪ ನಿರ್ದೇಶಕ ಉಮೇಶಪ್ಪ, ಸಲಹೆಗಾರ ಹೆಚ್.ಎ. ಭಿಕ್ಷಾವರ್ತಿಮಠ, ಮುಖ್ಯೋಪಾಧ್ಯಾಯರಾದ ಚಂದ್ರಶೇಖರ ಅಸುಂಡಿ, ನಾಗರಾಜ ಬ ಣಕಾರ, ಎನ್.ಡಿ. ಪಾಟೀಲ ಮತ್ತಿತರರಿದ್ದರು.

error: Content is protected !!