ಚೌಡಯ್ಯದಾನಾಪುರ : ಲೇಖನಿ ಸಾಮಗ್ರಿ ವಿತರಣಾ ಕಾರ್ಯಕ್ರಮದಲ್ಲಿ ಎಸ್‍ಡಿಎಂಸಿ ಅಧ್ಯಕ್ಷ ಜಿ.ವಿ.ದೀಪಾವಳಿ
ರಾಣೇಬೆನ್ನೂರು, ಜು.10- ಯಾರು ದಾನ, ಧರ್ಮ ಮಾಡುವಂತಹ ಗುಣಗಳನ್ನು ಬೆಳೆಸಿಕೊಂಡು ಮತ್ತೊಬ್ಬ ರಿಗೆ ದಾನ ಧರ್ಮ ಸಹಾಯ ಮಾಡುತ್ತಾರೋ ಅಂತವರು ಸಮಾಜದಲ್ಲಿ ಆದರ್ಶರಾಗಿರಲು ಸಾಧ್ಯ ಎಂದು ಎಸ್‍ಡಿಎಂಸಿ ಅಧ್ಯಕ್ಷ ಜಿ.ವಿ.ದೀಪಾವಳಿ ಹೇಳಿದರು.
ತಾಲ್ಲೂಕಿನ ಚೌಡಯ್ಯದಾನಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದನೇ ತರಗತಿ ಮಕ್ಕಳಿಗೆ ಆಹಾರ ಇಲಾಖೆಯ ನಿವೃತ್ತ ವ್ಯವಸ್ಥಾಪಕ ಎಸ್. ಎಂ. ಪಂಚಾಕ್ಷರಿ ಅವರು ಉಚಿತವಾಗಿ ಕೊಡಲ್ಪಟ್ಟ ಲೇಖನಿ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.
ಶ್ರೀಮಂತಿಕೆ ಎಂಬುದು ಹಲವರಲ್ಲಿ ಇರುತ್ತದೆ. ಆದರೆ ದಾನ ಧರ್ಮದಂತಹ ಗುಣಗಳು ಕಂಡು ಬರುವುದು ತುಂಬಾ ಕಡಿಮೆ, ಪಂಚಾಕ್ಷರಿ ಅವರು ಮಕ್ಕಳಿಗೆ ಉಚಿತವಾಗಿ ಲೇಖನಿ ಸಾಮಗ್ರಿಗಳನ್ನು ನೀಡಿರುವುದು ಅವರ ವಿಶಾಲ ಹೃದಯದ, ದಾನ ಧರ್ಮ ಮಾಡುವಂತಹ ಶ್ರೀಮಂತಿಕೆ ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಮುಖ್ಯ ಶಿಕ್ಷಕ ಐ.ಹೆಚ್.ಮೈದೂರ ಮಾತನಾಡಿ, ಪಂಚಾಕ್ಷರಿ ಅವರು ಪ್ರತೀ ವರ್ಷವೂ ಸಹ ತಾಲ್ಲೂಕಿನ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಲೇಖನ ಸಾಮಗ್ರಿಗಳನ್ನು ನೀಡುತ್ತಿರುವುದು ನಿಜಕ್ಕೂ ಶ್ಲ್ಯಾಘನೀಯವಾಗಿದೆ. ಇಂತಹ ದಾನ ಧರ್ಮದಂತಹ ಆದರ್ಶ ಗುಣಗಳು ಸರ್ವರಲ್ಲೂ ಮೂಡಬೇಕು ಅಂದಾಗ ಸಮಾಜಕ್ಕೆ ಅಪಾರವಾದ ಕೊಡುಗೆ ನೀಡಿದಂತಾಗುತ್ತದೆ ಎಂದರು.
ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವಿಜಯ ಕುಮಾರ ಪೂಜಾರ, ಸಹ ಶಿಕ್ಷಕರಾದ ರವಿ ಪಾಟೀಲ, ಸೈಯದ್ ಜುಲ್ಫೀಕರ್, ಎಸ್. ಎಸ್. ಮುಳಗುಂದ, ಪ್ರವೀಣ ಬನ್ನಿಮಟ್ಟಿ, ಹೊನ್ನಪ್ಪ ನುಗ್ಗಿಮರದ ಸೇರಿದಂತೆ ಎಸ್‍ಡಿಎಂಸಿಯ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.