ಕೊಟ್ಟೂರು, ಫೆ 12 – ಹಿಂದುಳಿದ ದಲಿತ ಸಮುದಾಯದವರು ಕ್ಷೇತ್ರದಲ್ಲಿ ಹೆಚ್ಚು ಸಂಖ್ಯೆ ಹೊಂದಿದ್ದು ಆದರೆ ಅಭಿವೃದ್ಧಿ ಮಾತ್ರ ಇಳಿಮುಖವಾಗಿದೆ. ಇದರಿಂದಾಗಿ ಈ ಹಿಂದೆ ಸಂತೋಷ ಲಾಡ್ ಹೇಳಿದಂತೆ ಬಳ್ಳಾರಿ ಜಿಲ್ಲೆಯಲ್ಲೇ ದಲಿತರ ಸಂಖ್ಯೆ ಹೆಚ್ಚು ಇದ್ದು, ಇವರಿಗೆ ಸಾಮಾಜಿಕ ನ್ಯಾಯ ಸಿಗುವಂತೆ ಆಗಲಿ ಎಂಬ ಅಭಿಪ್ರಾಯದಂತೆ ವಿಜಯ ನಗರ ಜಿಲ್ಲೆಯಲ್ಲಿ ಬರುವ ಎರಡು ಎಸ್ಸಿ ಕ್ಷೇತ್ರದಲ್ಲಿ ಎರಡು ಕಡೆ ಲಂಬಾಣಿ ಸಮು ದಾಯಕ್ಕೆ ಟಿಕೆಟ್ ನೀಡದೆ ಹಗರಿಬೊಮ್ಮನ ಹಳ್ಳಿ ಕ್ಷೇತ್ರಕ್ಕೆ ಬೇರೆ ಹಿಂದುಳಿದ ದಲಿತ ಸಮುದಾಯಕ್ಕೆ ಅವಕಾಶ ನೀಡಿ ಸಾಮಾಜಿಕ ನ್ಯಾಯ ಕೊಡಬೇಕು. ಕ್ಷೇತ್ರದಲ್ಲಿ ಆಗುವ ಬದ ಲಾವಣೆಯನ್ನು ರಾಜ್ಯ ನಾಯಕರು ಪರಿಶೀಲಿಸಿ ಟಿಕೆಟ್ ನೀಡಬೇಕು ಎಂದು ಎಂಎಂಜೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರ್ಷವರ್ಧನ್ ಅವರು ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸಿ.ಬಸವರಾಜ್ ಮಾತನಾಡಿ, ಶಾಸಕರ ಅನುದಾನದಲ್ಲಿ ಬರುವ ಸೌಲಭ್ಯಗಳು ತಮ್ಮ ತಮ್ಮ ಸಂಬಂಧಿಕರಿಗೆ ಕೊಡಿಸುವ ಮೂಲಕ ನಿಜವಾದ ಬಡವರನ್ನು ಸೌಲಭ್ಯ ವಂಚಿತರನ್ನಾಗಿ ಮಾಡಿದ್ದಾರೆ ಎಂದು ಹಗರಿಬೊಮ್ಮನಹಳ್ಳಿ ಶಾಸಕ ಭೀಮನಾಯ್ಕ ವಿರುದ್ಧ ಗುಡುಗಿದರು.
ಪರ್ಸೆಂಟೇಜ್ ನೀಡಿದರೆ ಮಾತ್ರ ಕಾಮಗಾರಿಗೆ ಗುದ್ದಲಿ ಪೂಜೆ ಮಾಡುತ್ತೀನಿ ಎನ್ನುವ ಶಾಸಕರು ಸಾಕು. ಸಾಮಾಜಿಕ ನ್ಯಾಯ ಅಡಿಯಲ್ಲಿ ಟಿಕೆಟ್ ಕೊಡಬೇಕು ಎಂದು ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ದೊಡ್ಡರಾಮಣ್ಣ ಹೇಳಿದರು.
ಬುಡ್ಡಿ ಬಸವರಾಜ್ ಮಾತನಾಡಿ, ಶಾಸ ಕರು ತಮಗೆ ಬೇಕಾದವರಿಗೆ ಸೂಕ್ತ ಸ್ಥಾನ ಕಲ್ಪಿಸಿಕೊಟ್ಟು ಮೂಲ ಕಾಂಗ್ರೆಸ್ ಕಾರ್ಯಕರ್ತರನ್ನು ಕಡೆಗಣಿಸುತ್ತಿರುವುದು ಈ ವಿರೋಧಿ ಅಲೆಗೆ ಕಾರಣವಾಗಿದೆ ಎಂದರು. ಈ ವಿಷಯವನ್ನು ಈಗಾಗಲೇ ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ ಎಂದರು. ಅನ್ಯ ಪಕ್ಷ ದಿಂದ ಬಂದಿರುವ ಭೀಮನಾಯ್ಕ ನಮ್ಮ ಕ್ಷೇತ್ರ ದವರಲ್ಲ ಹಾಗಾಗಿ ಸ್ಥಳೀಯ ಮುಖಂಡರಿಗೆ ಟಿಕೆಟ್ ನೀಡಿದರೆ ಗೆಲುವು ಸಾಧ್ಯ, ಇಲ್ಲದಿದ್ದರೆ ಪಕ್ಷಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎಂದರು.
ಈ ಸಂದರ್ಭದಲ್ಲಿ ಹೆಗ್ಡಾಳ್ ರಾಮಣ್ಣ, ಮುಟಗನಹಳ್ಳಿ ಕೊಟ್ರೇಶ, ಸುಧಾಕರಗೌಡ ಪಾಟೀಲ್, ಕನ್ನಳ್ಳಿ ಕೊಟ್ರೇಶ, ಸೋಮಲಿಂಗಪ್ಪ, ಮಹೇಶ್ ಹಾಗೂ ಹನಸಿ ಕೊಟ್ರೇಶ ಮುಂತಾದವರು ಮಾತನಾಡಿದರು.