ಜಗಳೂರು : ಅಂಬೇಡ್ಕರ್ ವೃತ್ತ ಬಳಕೆ ಕಡ್ಡಾಯವಾಗಲು  ಮಸಿ ಬಳಿದು ಜಾಗೃತಿ

ಜಗಳೂರು : ಅಂಬೇಡ್ಕರ್ ವೃತ್ತ ಬಳಕೆ ಕಡ್ಡಾಯವಾಗಲು  ಮಸಿ ಬಳಿದು ಜಾಗೃತಿ

ಜಗಳೂರು, ನ. 4 – ಅಂಬೇಡ್ಕರ್ ವೃತ್ತದ ಹೆಸರು ಕಡ್ಡಾಯವಾಗಲಿ  ಎಂದು ಅಂಬೇಡ್ಕರ್ ಪುತ್ಥಳಿ ಸಮಿತಿ ಹಾಗೂ ಪ್ರಗತಿ ಪರ ಸಂಘಟನೆ ಮುಖಂಡರುಗಳು, ಅಧಿಕಾರಿಗಳು  ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.

‌ಪಟ್ಟಣದ ಅಂಬೇಡ್ಕರ್ ವೃತ್ತದ ರಸ್ತೆ ಬದಿಯಲ್ಲಿನ ಅಂಗಡಿಗಳ ಬೋರ್ಡ್ ನಲ್ಲಿ `ಕೆಇಬಿ ವೃತ್ತ’ ಎಂಬುದಕ್ಕೆ ಸಾಂಕೇತಿಕವಾಗಿ ಮಸಿ ಬಳಿದು ಮನವರಿಕೆ ಮಾಡಿದರು.

ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಮತ್ತು ನಿರ್ವಹಣಾ ಸಮಿತಿ ಅಧ್ಯಕ್ಷ ತುಪ್ಪದಹಳ್ಳಿ ಪೂಜಾರ್ ಸಿದ್ದಪ್ಪ ಮಾತನಾಡಿ, ದಶಕಗಳ ಕನಸಿನಂತೆ ಪಟ್ಟಣದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿ ಅನಾವರಣಗೊಂಡು ವರ್ಷ ಕಳೆದಿದೆ.ಆದರೂ ಸಾರ್ವಜನಿಕರ ಗಮನಕ್ಕೆ ಅಂಬೇಡ್ಕರ್ ವೃತ್ತ ಎಂಬುದು ಖ್ಯಾತಿ ಹೊಂದಿಲ್ಲ. ಕಾರಣ ಕೆಇಬಿ ಕಛೇರಿ ಹೊಂದಿದ್ದರಿಂದ ಕೆಇಬಿ ವೃತ್ತ ಎಂದು ಇಂದಿಗೂ ಮನೆ ಮಾತಾಗಿದೆ. ಕೂಡಲೇ ಪಟ್ಟಣ ಪಂಚಾಯಿತಿ  ಅಧಿಕಾರಿಗಳು ವೃತ್ತದಲ್ಲಿನ ನೆರೆಹೊರೆಯ ಅಂಗಡಿ ಬೋರ್ಡ್‌ಗಳಲ್ಲಿ ಅಂಬೇಡ್ಕರ್ ವೃತ್ತ ಎಂದು  ಕಡ್ಡಾಯವಾಗಿ ನಮೂದಿಸಲು  ಜಾಗೃತಿ ಮೂಡಿಸಬೇಕು ಎಂದು ಆಗ್ರಹಿಸಿದರು.

ತಹಶೀಲ್ದಾರ್ ಸೈಯ್ಯದ್ ಕಲೀಂ ಉಲ್ಲಾ ಮೌಖಿಕ ಮನವಿ ಸ್ವೀಕರಿಸಿ ಮಾತನಾಡಿ, ಹಲವು ವರ್ಷಗಳಿಂದ ಕೆಇಬಿ ಇಲಾಖೆ ಇರುವುದರಿಂದ ಜನರಲ್ಲಿ ರೂಢಿ ಯಾಗಿದೆ. ಇದೀಗ ಅಂಬೇಡ್ಕರ್ ಪುತ್ಥಳಿ ಹೊಂದಿದ್ದು, ಮುಂಬ ರುವ ದಿನಗಳಲ್ಲಿ ಸ್ವಾಭಾವಿಕವಾಗಿ  ಅಂಬೇಡ್ಕರ್ ವೃತ್ತದ ಪ್ರಚಾರ ವಾಗುತ್ತದೆ. ಅಗತ್ಯ ನಾಮ ಫಲಕ, ವಿದ್ಯುತ್ ದೀಪ ಅಳವಡಿಸಿ  ಸುತ್ತಲೂ ಅಭಿವೃದ್ದಿಗೊ ಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸ್ಥಳಕ್ಕೆ ಶಾಸಕ ಬಿ. ದೇವೇಂದ್ರಪ್ಪ ಭೇಟಿ : ಅಂಬೇಡ್ಕರ್ ವೃತ್ತಕ್ಕೆ ಶಾಸಕ.ಬಿ.ದೇವೇಂದ್ರಪ್ಪ ಭೇಟಿ ನೀಡಿ, ನಾನೊಬ್ಬ ಅಂಬೇಡ್ಕರ್ ಅಭಿಮಾನಿಯಾಗಿದ್ದು ಅಂಬೇಡ್ಕರ್ ವೃತ್ತದ ಸರ್ವತೋಮುಖ ಅಭಿವೃದ್ದಿಗೆ ಬದ್ದನಾಗಿರುವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾ ಧಿಕಾರಿ ಲೋಕ್ಯಾನಾಯ್ಕ, ಪಿಎಸ್ಐ ಸಾಗರ್, ದಲಿತ ಸಂಘಟನೆ ಮುಖಂಡ ಭಾರತ್ ಗ್ಯಾಸ್ ಓಬಣ್ಣ, ವಕೀಲ ಹನುಮಂತಪ್ಪ, ಕುಬೇಂದ್ರಪ್ಪ, ಸತೀಶ್ ಮಲೆಮಾಚಿಕೆರೆ, ಮಂಜಣ್ಣ, ಶಿವಣ್ಣ, ಕರಿಬಸಪ್ಪ, ಉಮೇಶ್, ಶಿವಮೂರ್ತಿ, ಗೌರಿಪುರ ಸತ್ಯಮೂರ್ತಿ, ಪ್ರಗತಿಪರ ಮುಖಂಡ ವ್ಯಾಸಗೊಂ ಡನಹಳ್ಳಿ   ರಾಜಪ್ಪ , ಧನ್ಯಕುಮಾರ್, ಮಾದಿಹಳ್ಳಿ ಮಂಜುನಾಥ್ ಮುಂತಾದವರು ಭಾಗವಹಿಸಿದ್ದರು.

error: Content is protected !!