ಪತ್ರಿಕಾ ವಿತರಕ ಶಿವಕುಮಾರ್ ಪತ್ನಿಗೆ ಪರಿಹಾರ ವಿತರಿಸಿದ ಮಾಜಿ ಶಾಸಕ ಎಸ್‌ವಿಆರ್

ಪತ್ರಿಕಾ ವಿತರಕ ಶಿವಕುಮಾರ್ ಪತ್ನಿಗೆ ಪರಿಹಾರ ವಿತರಿಸಿದ ಮಾಜಿ ಶಾಸಕ ಎಸ್‌ವಿಆರ್

ಜಗಳೂರು, ನ.4-  ಕಳೆದ ವರ್ಷ ಸಾವನ್ನಪ್ಪಿದ್ದ ಪತ್ರಿಕಾ ವಿತರಕ ಎನ್. ಶಿವಕುಮಾರ್ ಅವರ ಪತ್ನಿ ನೇತ್ರಾವತಿ ಅವರಿಗೆ  ಮಾಜಿ ಶಾಸಕ ಎಸ್.ವಿ ರಾಮಚಂದ್ರ ಅವರು ವೈಯಕ್ತಿಕ ವಾಗಿ 30 ಸಾವಿರ  ಪರಿಹಾರ  ನೀಡಿ, ಸಾಂತ್ವನ ಹೇಳಿದರು.

ಪಟ್ಟಣದ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಎಸ್.ವಿ ರಾಮಚಂದ್ರ ಮಾತನಾಡಿ, ಮೃತ ಶಿವಕುಮಾರ್ ಕುಟುಂಬದ  ಆರ್ಥಿಕ ಸಂಕಷ್ಟದ ಬಗ್ಗೆ ಅಧ್ಯಕ್ಷರು ಸೇರಿದಂತೆ ಪತ್ರಕರ್ತರು ನನ್ನ ಗಮನಕ್ಕೆ ತಂದಿದ್ದರಿಂದ ಮೃತನ ಕುಟುಂಬಕ್ಕೆ ಸಹಾಯ ಮಾಡಿದ್ದೇನೆ ಎಂದರು.

ಪತ್ರಕರ್ತರ ಭವನ ನಿರ್ಮಾಣಕ್ಕೆ  ನಾನು ಶಾಸಕನಾಗಿದ್ದಾಗ 10 ಲಕ್ಷ ಅನುದಾನ ನೀಡಲಾಗಿತ್ತು. ಇದೀಗ ಕಟ್ಟಡ ಆರ್‍ಸಿಸಿ ಹಂತಕ್ಕೆ ಬಂದಿದೆ. ಸಂಸದರು, ಎಂಎಲ್‍ಸಿ ಅವರಿಂದಲೂ ಅನುದಾನ ಕೊಡಿಸಲಾಗುವುದು. ಆದಷ್ಟು ಬೇಗ ಭವನ ಪೂರ್ಣಗೊಳಿಸಿ ಉದ್ಘಾಟನೆ ಮಾಡಿ ಎಂದರು. 

ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಸ್.ಚಿದಾನಂದ ಮಾತನಾಡಿ,
ಮೃತ ಶಿವಕುಮಾರ್ ಅವರ ಪತ್ನಿಗೆ ಉದ್ಯೋಗ,
ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುವಂತೆ ಶಾಸಕರನ್ನು ಮನವಿ ಮಾಡಲಾಗಿತ್ತು. ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ನಮ್ಮ ಮನವಿಗೆ ಸ್ಪಂದಿಸಿ ಇಂದು ಪರಿಹಾರ ನೀಡಿರುವುದು ಶ್ಲ್ಯಾಘನೀಯ. ಜೊತೆಗೆ ಪತ್ರಕರ್ತರ ಭವನಕ್ಕೂ ನಿವೇಶನ, 10 ಲಕ್ಷ ರೂ. ಹಣ ನೀಡಿದ್ದರು ಎಂದು ತಿಳಿಸಿದರು.

ಇದೇ ವೇಳೆ  ಮೃತ ಪತ್ರಿಕಾ ವಿತರಕ ಶಿವಕುಮಾರ್  ಪತ್ನಿ ನೇತ್ರಾವತಿಗೆ   ಕಾರ್ಯನಿರತ ಪತ್ರಕರ್ತರ ಸಂಘದಿಂದ  10 ಸಾವಿರ ಚೆಕ್ ವಿತರಿಸಲಾಯಿತು.  ಮೃತ ಶಿವಕುಮಾರ್ ಪತ್ನಿ ನೇತ್ರಾವತಿ ನನಗೆ ಇಬ್ಬರು ಮಕ್ಕಳಿದ್ದು, ಜೀವನ ಮಾಡಲು ಯಾವುದಾದರೂ ಕೆಲಸ ಕೊಡಿಸುವಂತೆ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಡಿ. ಶ್ರಿನಿವಾಸ್, ಹಿರಿಯ ಪತ್ರಕರ್ತ ಅಣಬೂರು ಮಠದ ಕೊಟ್ರೇಶ್, ಕಾ.ನಿ.ಪ.ಸಂಘದ ಮಾಜಿ ಅಧ್ಯಕ್ಷ ಎಂ.ಸಿ.ಬಸವರಾಜ್, ಕಾರ್ಯದರ್ಶಿ ಜೆ.ಓ.ರವಿಕುಮಾರ್, ಖಜಾಂಚಿ ಜಗದೀಶ್, ಸೋಮನಗೌಡ, ಎ.ಎಂ.ಮಂಜಯ್ಯ, ರಕೀಬ್, ವೇದಮೂರ್ತಿ, ಮಹಾಲಿಂಗಪ್ಪ, ಉಜ್ಜಿನಪ್ಪ ಸೇರಿದಂತೆ ಮತ್ತಿತರರಿದ್ದರು.

error: Content is protected !!