ಮಣಿಪುರದ ಮಹಿಳೆಯರ ಅವಹೇಳನ ಕಠಿಣ ಶಿಕ್ಷೆ ವಿಧಿಸಲು ಒತ್ತಾಯ

ಮಣಿಪುರದ ಮಹಿಳೆಯರ ಅವಹೇಳನ ಕಠಿಣ ಶಿಕ್ಷೆ ವಿಧಿಸಲು ಒತ್ತಾಯ

ಜಗಳೂರಿನಲ್ಲಿ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ

ಜಗಳೂರು, ಜು.24- ಮಣಿಪುರದ ಮಹಿಳೆಯರನ್ನು ನಗ್ನಗೊಳಿಸಿ ಮೆರವಣಿಗೆ ಮಾಡಿ, ಸಾಮೂಹಿಕ ಅತ್ಯಾಚಾರ ಮಾಡಿದ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಒತ್ತಾಯಿಸಿ,  ತಾಲ್ಲೂಕು ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ  ಇಂದು ಪ್ರತಿಭಟನೆ ನಡೆಸಲಾಯಿತು.

ಮಹಿಳೆಯರ ಮೇಲೆ ಪೈಶಾಚಿಕ ಕೃತ್ಯ ಎಸಗಿರುವ ತಪ್ಪಿತಸ್ಥರಿಗೆ ಕಠಿಣ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿ   ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಘಟನೆಯಿಂದ ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಜನರಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ವಿಫಲರಾಗಿರುವ ಮಣಿಪುರ ರಾಜ್ಯದ ಮುಖ್ಯಮಂತ್ರಿ ಕೂಡಲೇ ರಾಜೀನಾಮೆ ನೀಡಬೇಕು.  ಮಣಿಪುರ ರಾಜ್ಯದಲ್ಲಿ ಹಿಂಸಾಚಾರ, ಮಹಿಳೆಯರ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ದೌರ್ಜನ್ಯದಂತಹ ಘಟನೆಗಳು ಮರುಕಳಿಸದಂತೆ ನಿಗ್ರಹಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. 

ಪ್ರತಿಭಟನೆಯಲ್ಲಿ ಡಿ.ಎಸ್.ಎಸ್ ತಾಲ್ಲೂಕು ಸಂಚಾಲಕ ಮಲೆಮಾಚಿಕೆರೆ ಸತೀಶ್, ಎಸ್.ಎಫ್‌.ಐ ಜಿಲ್ಲಾ ಸಂಚಾಲಕ ಅನಂತ್ ರಾಜ್, ಕರುನಾಡ ನವ ನಿರ್ಮಾಣ ವೇದಿಕೆ ಮಹಾಲಿಂಗಪ್ಪ,  ಮಾನವ ಬಂಧುತ್ವ ವೇದಿಕೆ ಧನ್ಯಕುಮಾರ್ ಎ.ಐ.ಎಸ್.ಎಫ್ ಸಂಘಟನೆಯ ಮಾದಿಹಳ್ಳಿ ಮಂಜಪ್ಪ,  ಡಿ.ವೈ.ಎಫ್‌.ಐ ಮುಖಂಡ ಆರ್. ಓಬಳೇಶ್, ದಲಿತ ವಿದ್ಯಾರ್ಥಿ ಸಂಘಟನೆ ಮುಖಂಡ ಜೀವನ್‌ಶಿವು, ಕೃಷಿ ಕೂಲಿಕಾರರ ಸಂಘಟನೆಯ ಪಲ್ಲಾಗಟ್ಟೆ ಸುಧಾ, ರೈತ ಸಂಘಟನೆಯ  ತಿಪ್ಪೇಸ್ವಾಮಿ ಮತ್ತಿತರರು  ಭಾಗವಹಿಸಿದ್ದರು.

error: Content is protected !!