ಜಗಳೂರಿನ ತಹಶೀಲ್ದಾರ್ ಸಂತೋಷ ಕುಮಾರ್
ಜಗಳೂರು, ಏ.27- 12ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ ಜಗಜ್ಯೋತಿ ಬಸವಣ್ಣನವರ ವಚನಗಳು ಮತ್ತು ಅವರ ಚಿಂತನೆ ಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ತಹಶೀ ಲ್ದಾರ್ ಜಿ. ಸಂತೋಷ್ ಕುಮಾರ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದಿಂದ ಶ್ರೀ ಬಸವ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ತಹಶೀಲ್ದಾರ್ ಸಂತೋಷ್ಕುಮಾರ್, ಅನುಭವ ಮಂಟಪ ಸ್ಥಾಪನೆಯ ಮೂಲಕ ಸರ್ವರಿಗೂ ಸಮಾನತೆ ಸಾರಿದ ಬಸವಣ್ಣನವರು ಅವರ ವಚನಗಳ ಮೂಲಕ ಜನಜಾಗೃತಿ ಉಂಟು ಮಾಡಿದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚುನಾವಣೆ ಅಧಿಕಾರಿ ಎಸ್. ರವಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಮಹೇಶ್, ತಾಲ್ಲೂಕು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಜೆ.ಎನ್. ಶಿವನಗೌಡ, ಎಂ.ಎಸ್. ಪಾಟೀಲ್, ದಸಂಸ ಮುಖಂಡ ಸತೀಶ್ ಮತ್ತು ವಿವಿಧ ಇಲಾಖೆಗಳ ನೌಕರರು ಹಾಜರಿದ್ದರು.