ನ್ಯಾಮತಿ, ಜ.27- ಭಾರತ ದೇಶದಲ್ಲಿ ಹಲವು ಜಾತಿ, ಜನಾಂಗದ ಜನರು ವಾಸವಿದ್ದು ನಾವೆಲ್ಲರೂ ಒಂದೇ ಭಾರತೀಯರು ಎಂದು ತಿಳಿದುಕೊಂಡು ಜಾತಿ ಭೇದ ಮರೆತು ನಾವೆಲ್ಲರೂ ಭಾರತೀಯರು ನಾವು ಎಲ್ಲರೂ ಬಾಳಬೇಕು ಎಂದು ಸಿ.ಎಂ. ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ನ್ಯಾಮತಿ ಪಟ್ಟಣದ ಸರ್ಕಾರಿ ಬಾಲಕಿ ಯರ ಪದವಿಪೂರ್ವ ಕಾಲೇಜಿನ ಆವರಣ ದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲ್ಲೂಕು ಆಡಳಿತದ ವತಿಯಿಂದ ಹಮ್ಮಿ ಕೊಳ್ಳಲಾಗಿದ್ದ 74ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಧ್ವಜಾರೋಹಣ ವನ್ನು ನೆರವೇರಿಸಿದ ತಹಶೀಲ್ದಾರ್ ಬಿ.ವಿ.ಗಿರೀಶ್ ಬಾಬು ಮಾತನಾಡಿ, 1950ರ ಜನವರಿ 26 ರಂದು ಸಂವಿಧಾನವನ್ನು ಅಧಿಕೃತವಾಗಿ ಜಾರಿಗೊಳಿಸಿ, ನಮ್ಮ ಸಂವಿಧಾನವು ನಮಗೆ ಮುಕ್ತವಾದ ನಾಗರಿಕ ಹಕ್ಕುಗಳನ್ನು ನೀಡಿದೆ.
ನಮ್ಮ ಪ್ರಜಾಪ್ರಭುತ್ವದ ಮೂಲ ತತ್ವಗಳಾದ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಯಾವಾಗಲೂ ಅನುಸರಿಸುವ ಜವಾಬ್ದಾರಿ ನಮ್ಮ ಮೇಲೆ ಇರಿಸಿದೆ ಎಂದು ಹೇಳಿದರು.