ಹೊನ್ನಾಳಿ : ಅಂತರರಾಷ್ಟ್ರೀಯ ಯೋಗ ದಿನದ ಜಾಗೃತಿ

ಹೊನ್ನಾಳಿ : ಅಂತರರಾಷ್ಟ್ರೀಯ ಯೋಗ ದಿನದ ಜಾಗೃತಿ

ಹೊನ್ನಾಳಿ, ಜೂ. 20- ಯೋಗ ಪುರಾತನ ಕಲೆಯಾಗಿದೆ. ಯೋಗವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಹಲವು ರೋಗಗಳಿಗೆ ಮುಕ್ತಿಯನ್ನು ನೀಡಬಹುದು ಎಂದು ಮುನಿ ಶ್ರೇಷ್ಟರಾದ ಪತಂಜಲಿ ಮಹರ್ಷಿಯವರು ಸಹಸ್ರಾರು ವರ್ಷಗಳ ಹಿಂದೆಯೇ ಸಾರಿದ್ದಾರೆ ಎಂದು ಹೊನ್ನಾಳಿ ಪತಂಜಲಿ ಯೋಗ ಸಮಿತಿಯ ಸಂಚಾಲಕ ಪ್ರಕಾಶ್ ಹೆಬ್ಬಾರ್ ಹೇಳಿದರು. 

ಪಟ್ಟಣದ ಪತಂಜಲಿ ಯೋಗ ಸಮಿತಿ ಹಾಗೂ ಭಾರತೀಯ ವಿದ್ಯಾ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಅಂತರರಾಷ್ಟ್ರೀಯ ಯೋಗ ದಿನದ ಮುನ್ನಾ ದಿನ ಜಾಥಾದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಸಂದರ್ಭದಲ್ಲಿ ಅವರು ಮಾತನಾಡಿದರು. 

ಪತಂಜಲಿ ಯೋಗ ಸಮಿತಿಯ ಸಂಚಾಲಕರಾದ ಎಂ.ಬಿ. ರುದ್ರೇಶ್ ಮಾತನಾಡಿದರು.  ಭಾರತೀಯ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಪತಂಜಲಿ ಯೋಗ ಸಮಿತಿಯ ಸಹಯೋಗದಲ್ಲಿ ಪಟ್ಟಣದ ಕೋಟೆ, ಬಸ್ ನಿಲ್ದಾಣ, ಸರ್ವರ್ ಕೇರಿ, ಟಿ.ಎಂ. ರಸ್ತೆ, ಮಾರಿಕೊಪ್ಪ ರಸ್ತೆಯಲ್ಲಿ ಜಾಥಾದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. 

ಈ ಸಂದರ್ಭದಲ್ಲಿ ಪತಂಜಲಿ ಯೋಗ ಸಮಿತಿಯ ಸಂಚಾಲಕರಾದ ರಾಘವೇಂದ್ರ
ಎಲ್. ವೈಶ್ಯರ, ಸುರೇಶ್ ಕುಂಬಾರ್, ಅಂಬಿಕಾ ಹೆಬ್ಬಾರ್, ಸುಜಾತ ಬೆನ್ನೂರ್‌ಮಠ್, ವಿದ್ಯಾ, ಬೀಜಿತಾ, ಶೀಲಾ, ಗಿರಿಜಮ್ಮ  ಭಾರತೀಯ ವಿದ್ಯಾಸಂಸ್ಥೆಯ ಶಿಕ್ಷಕರಾದ ತಿಮ್ಮೇಶ್ ಆರ್. ಪುನೀತ್, ಶಿವಲಿಂಗಪ್ಪ, ರವಿ, ಸತೀಶ್, ಅನುಷಾ, ಮಂಜುನಾಥ್, ಗಿರೀಶ್ ಇದ್ದರು.

error: Content is protected !!