ಮಲೇಬೆನ್ನೂರು, ಮಾ.3- ಕೊಂಡಜ್ಜಿ ಗ್ರಾಮದಿಂದ ಕಕ್ಕರಗೊಳ್ಳ-ಗಂಗನರಸಿ ರಸ್ತೆಗೆ ವಡೇರಹಳ್ಳಿ ಮಾರ್ಗವಾಗಿ ಕೂಡುವ 1.20 ಕಿ.ಮೀ ರಸ್ತೆಯನ್ನು 2 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಎಸ್.ರಾಮಪ್ಪ, ವಿಧಾನ ಪರಿಷತ್ ಸದಸ್ಯ ಮೋಹನ್ ಕುಮಾರ್ ಕೊಂಡಜ್ಜಿ ಅವರು ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ನಂತರ ಕಕ್ಕರಗೊಳ್ಳ – ಚಿಕ್ಕಬಿದರಿ ರಸ್ತೆಯನ್ನು ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಕಾಮಗಾರಿ ಮತ್ತು ಕರ್ಲಹಳ್ಳಿಯಿಂದ ಸಾರಥಿ ಸೇರುವ ರಸ್ತೆಯನ್ನು ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಕಾಮಗಾರಿಗೂ ಇದೇ ವೇಳೆ ಚಾಲನೆ ನೀಡಿದರು.
ಜೊತೆಗೆ ಕಕ್ಕರಗೊಳ್ಳ-ಚಿಕ್ಕಬಿದಿರಿ ರಸ್ತೆಯ ಆಯ್ದ ಭಾಗಗಳ ಅಭಿವೃದ್ಧಿ ಕಾಮಗಾರಿಯನ್ನು 5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಹಾಗೂ ಹೆಚ್.ಎಂ.ರಸ್ತೆಯಿಂದ ಅರಸೀಕೆರೆ ಸೇರುವ ಕೊಂಡಜ್ಜಿ ಗ್ರಾಮ ಪರಿಮಿತಿಯಲ್ಲಿ ಸಿಸಿ ಚರಂಡಿ ಮತ್ತು ರಸ್ತೆ ಅಭಿವೃದ್ಧಿ ಪಡಿಸುವ 5 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೂ ಈ ದಿನವೇ ಗುದ್ದಲಿ ಪೂಜೆ ಮಾಡಿ ಗಮನ ಸೆಳೆದರು.
ಮಾಜಿ ಶಾಸಕ ಬಿ.ಪಿ.ಹರೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ, ಹರಿಹರ ತಾ. ಗ್ರಾಮ ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟಿ ಲಿಂಗರಾಜ್ ಸೇರಿದಂತೆ ಸ್ಥಳೀಯ ಗ್ರಾ.ಪಂ.ಗಳ ಅಧ್ಯಕ್ಷರು, ಗ್ರಾ.ಪಂ. ಸದಸ್ಯರು, ಕೊಂಡಜ್ಜಿ, ಚಿಕ್ಕಬಿದರಿ, ಗಂಗನರಸಿ, ಸಾರಥಿ ಗ್ರಾಮಸ್ಥರು ಈ ವೇಳೆ ಹಾಜರಿದ್ದರು.