ಮಲೇಬೆನ್ನೂರು, ಮಾ. 5 – ಕುಂಬಳೂರು ಗ್ರಾಮದಿಂದ ನಿಟ್ಟೂರುವರೆಗಿನ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಸ್. ರಾಮಪ್ಪ ಅವರು ಗುರುವಾರ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಶಾಸಕರು, 3 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿದೆ. ಜೊತೆಗೆ ತಾಲ್ಲೂಕಿನ ಅನೇಕ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಗಳಿಗೂ ಚಾಲನೆ ನೀಡಲಾಗುವುದೆಂದರು.
ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಲೀಲಾ ಶಿವಕುಮಾರ್, ಉಪಾಧ್ಯಕ್ಷ ಎ.ಕೆ. ಹನುಮಂತಪ್ಪ, ಸದಸ್ಯರಾದ ಎನ್, ಕಲ್ಲೇಶ್, ಶ್ರೀಮತಿ ಉಮಾದೇವಿ ಶಿವರಾಮಚಂದ್ರಪ್ಪ, ತಾ.ಪಂ. ಮಾಜಿ ಅಧ್ಯಕ್ಷ ಮಾಗಾನಹಳ್ಳಿ ಹಾಲಪ್ಪ, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ಡಿ.ಸಿ.ಸಿ. ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಕಿಲ್ ಕೊಂಡಜ್ಜಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಆರ್.ಹೆಚ್. ಬಸವರಾಜ್, ಹುಲ್ಲುಮನಿ ನಿಂಗಪ್ಪ, ವೈ. ಶ್ರೀನಿವಾಸ್, ಕೆ. ಸುಭಾಸ್ಚಂದ್ರ, ಎ.ಕೆ. ಕುಬೇರಪ್ಪ, ವೈ. ರಮೇಶ್, ಕಡೇಮನಿ ಪುಟ್ಟಪ್ಪ, ಬೆನ್ನೂರು ಕರಿಬಸಪ್ಪ, ಕೆ. ಕಾಮರಾಜ್, ಎಂ.ವಾಸು ದೇವಮೂರ್ತಿ, ಕೆ.ಎಸ್. ಆಂಜನೇಯ, ಕೆ. ತಿಮ್ಮಣ್ಣ, ನಾಗಣ್ಣ, ಕೆ.ಎಸ್. ಆಂಜನೇಯ, ನಿಟ್ಟೂರಿನ ಕೆ. ಏಕಾಂತಪ್ಪ, ಹುರುಳಿ ಹನುಮಂತಪ್ಪ , ಮಲೇಬೆನ್ನೂರಿನ ಭೋವಿಕುಮಾರ್ ಮಲ್ಲನಾಯ್ಕನಹಳ್ಳಿ ಶೇಖರಪ್ಪ, ಪಿಡಬ್ಲ್ಯೂಡಿ ಇಂಜಿನಿಯರ್ ಶಿವರುದ್ರಪ್ಪ, ಪಿಡಿಓ ಮೂರ್ತಿ, ಗುತ್ತಿಗೆದಾರ ರಮೇಶ್, ಈ ವೇಳೆ ಹಾಜರಿದ್ದರು.