ಮಲೇಬೆನ್ನೂರು, ಮಾ. 3- ಸೌಹಾರ್ದತೆ ಸಾರುವ ಇಲ್ಲಿನ ಪ್ರಸಿದ್ಧ ಹಜರತ್ ಸೈಯದ್ ಹಬೀಬುಲ್ಲಾ ಷಾ ಖಾದ್ರಿ ಅವರ ಗಂಧ ಮತ್ತು ಉರುಸು ಗುರುವಾರ ರಾತ್ರಿ ದರ್ಗಾ ಆವರಣದಲ್ಲಿ ಪ್ರಸಿದ್ಧ ಖಾವ್ವಲರಿಂದ ಹಮ್ಮಿಕೊಂಡಿದ್ದ ಖವ್ವಾಲಿ ಕಾರ್ಯಕ್ರಮವನ್ನು ನೋಡಲು ಹರಿಹರ, ದಾವಣಗೆರೆ, ರಾಣೆಬೆನ್ನೂರು, ಹೊನ್ನಾಳಿ, ಚನ್ನಗಿರಿ, ಬಸವಾಪಟ್ಟಣ, ತುಮ್ಮಿನಕಟ್ಟಿ, ರಟ್ಟೀಹಳ್ಳಿ ಸೇರಿದಂತೆ ದೂರದ ಊರುಗಳಿಂದ ಜನ ದಾಖಲೆ ಸಂಖ್ಯೆಯಲ್ಲಿ ಆಗಮಿಸಿದ್ದರು.
ಯುವ ಗಾಯಕ ಉತ್ತರ ಪ್ರದೇಶದ ರಿಯೀಸ್ ಹನೀಫ್ ಅವರ ಖವ್ವಾಲಿ ಜನಮನ ಸೆಳೆಯಿತು. ಆತನ ಹಾಡುಗಳಿಗೆ ಹುಚ್ಚೆದ್ದು ಕುಣಿದ ಯುವಕರು ನೋಟಿನ ಸುರಿಮಳೆ ಸುರಿಸಿ ಖುಷಿ ಪಟ್ಟರು.
ದೆಹಲಿಯ ಛೋಟೆ ಮಜೀದ್ ಶೋಲೆ ಅವರ ಖವ್ವಾಲಿ ಕೂಡ ಆಕರ್ಷಣೀಯ ವಾಗಿತ್ತು. ಪಟ್ಟಣದ ಹೆದ್ದಾರಿ, ಬಸ್ ನಿಲ್ದಾಣ ಸೇರಿದಂತೆ ಎಲ್ಲಾ ಸ್ಥಳಗಳು ವಾಹನಗಳಿಂದ ಭರ್ತಿಯಾಗಿದ್ದವು.
ಶಾಸಕ ಎಸ್ ರಾಮಪ್ಪ, ಮಾಜಿ ಶಾಸಕ ಹೆಚ್. ಎಸ್. ಶಿವಶಂಕರ್, ಜಿ ಪಂ ಮಾಜಿ ಸದಸ್ಯರಾದ ಬೆಣ್ಣೆಹಳ್ಳಿ ಹಾಲೇಶಪ್ಪ, ಎಂ. ನಾಗೇಂದ್ರಪ್ಪ, ಬಿ.ಎಂ. ವಾಗೀಶ್ ಸ್ವಾಮಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಚಿದಾನಂದಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ಕಾಂಗ್ರೇಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಉರುಸ್ ಕಮಿಟಿ ಅಧ್ಯಕ್ಷ ಖುರ್ಬಾನ್ ಅಲಿ, ಮುಖಂಡರಾದ ಸೈಯದ್ ಜಾಕೀರ್, ಎಂ.ಬಿ. ಸಜ್ಜು, ಸಿರಿಗೆರೆ ಪರಮೇಶ್ವರಗೌಡ, ಕೆ.ಪಿ. ಗಂಗಾಧರ್. ಶೇರ್ ಅಲಿ, ಸಿ. ಅಬ್ದುಲ್ ಹಾದಿ, ಎಂ.ಬಿ.ಗುಲ್ಜಾರ್ ಸಾಬ್, ಎಂ.ಬಿ. ಪೈಜು, ಬಿ. ರಫೀವುಲ್ಲಾ, ಖುದ್ದೂಸ್ ಸಾಬ್, ಶಕ್ತಿ ಸಾ ಮಿಲ್ ಮುನ್ನಾ, ಯೂನಸ್, ಪುರಸಭೆ ಸದಸ್ಯರಾದ ನಯಾಜ್, ಸಾಬೀರ್, ಮಹಮದ್ ಖಲೀಲ್, ಷಾ ಅಬ್ರಾರ್, ದಾದಾಫೀರ್, ಚಮನ್ ಷಾ, ಬಿ. ಮಂಜುನಾಥ್, ಪುರಸಭೆ ಮಾಜಿ ಸದಸ್ಯರಾದ ಎ. ಆರೀಫ್ ಅಲಿ, ಯೂಸೂಫ್, ದಾದಾವಲಿ, ಜಿಯಾವುಲ್ಲಾ, ಗ್ರಾ.ಪಂ. ಮಾಜಿ ಅಧ್ಯಕ್ಷ ಭೋವಿ ಕುಮಾರ್, ಜನತಾ ಬಜಾರ್ ನಿರ್ದೇಶಕ ಪಿ.ಹೆಚ್. ಶಿವಕುಮಾರ್, ವೀರಭದ್ರೇಶ್ವರ ದೇವಸ್ಥಾನದ ಬಿ.ವಿ. ರುದ್ರೇಶ್ ಮತ್ತು ಪುರಸಭೆ ಮುಖ್ಯಾಧಿಕಾರಿ ಎ. ಸುರೇಶ್ ಸೇರಿದಂತೆ ಇನ್ನೂ ಅನೇಕರು ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ ಖಾವ್ವಾಲಿಯಲ್ಲಿ ಭಾಗವಹಿಸಿದ್ದರು.
ಸಿಪಿಐ ಗೌಡಪ್ಪ ಗೌಡ, ಪಿ.ಎಸ್.ಐ. ಪ್ರಭು ಕೆಳಗಿನಮನೆ, ಎಎಸ್ಐ ಶ್ರೀನಿವಾಸ್ ಅವರ ನೇತೃತ್ವದಲ್ಲಿ ನೂರಾರು ಪೊಲೀಸರು ವಾಹನಗಳ ಹಾಗೂ ಜನರ ನಿಯಂತ್ರಣಕ್ಕೆ ಹರಸಾಹಸ ಪಟ್ಟರು.