ಮಲೇಬೆನ್ನೂರಿನಲ್ಲಿ 24ಕ್ಕೆ ಬಸವೇಶ್ವರ ತೇರು

ಮಲೇಬೆನ್ನೂರಿನಲ್ಲಿ 24ಕ್ಕೆ ಬಸವೇಶ್ವರ ತೇರು

ಮಲೇಬೆನ್ನೂರು  ಪಟ್ಟಣದ ಆರಾಧ್ಯದೈವ ಶ್ರೀ ಬಸವೇಶ್ವರ ದೇವರ ರಥೋತ್ಸವವು ಇದೇ ದಿನಾಂಕ 24ರ ಶುಕ್ರವಾರ ಸಂಜೆ 4.30ಕ್ಕೆ ಜರುಗಲಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ಉಪತಹಶೀಲ್ದಾರ್ ಆರ್.ರವಿ ತಿಳಿಸಿದ್ದಾರೆ.  

ಇಂದು ರಾತ್ರಿ 9 ಗಂಟೆಗೆ ಶ್ರೀ ಮಹಾಗಣಪತಿ ಪೂಜೆಯೊಂದಿಗೆ ಕಂಕಣಧಾರಣೆ ನೆರವೇರಲಿದೆ.ನಾಳೆ ಬುಧವಾರ ಬೆಳಿಗ್ಗೆ 8 ಗಂಟೆಗೆ ಶ್ರೀ ಮಹಾಗಣಪತಿ ಪೂಜೆ, ರುದ್ರಾಭಿಷೇಕ, ಸಣ್ಣ ಉತ್ಸವಕ್ಕೆ ಅಲಂಕಾರ, ಬಲಿದಾನ ಹಾಗೂ ಉತ್ಸವ ನಡೆಯಲಿದೆ. 

ದಿನಾಂಕ 23ರ ಗುರುವಾರ ಬೆಳಿಗ್ಗೆ 8 ಗಂಟೆಗೆ ಪೂಜೆ, ರುದ್ರಾಭಿಷೇಕದ ನಂತರ ಸಣ್ಣ ಉತ್ಸವ ಮತ್ತು ರಾತ್ರಿ 9ಕ್ಕೆ ರಥಕ್ಕೆ ಕಳಸಾರೋಹಣ ಮಾಡಲಾಗುವುದು. 

ದಿನಾಂಕ 24ರ ಶುಕ್ರವಾರ ಬೆಳಿಗ್ಗೆ ಎಂದಿನಂತೆ ಪೂಜೆ, ರುದ್ರಾಭಿಷೇಕ, ಸಣ್ಣ ಉತ್ಸವ, ಬೆಳಿಗ್ಗೆ 9ಕ್ಕೆ ರಥಕ್ಕೆ ತೈಲಾಭಿಷೇಕ, ಮಧ್ಯಾಹ್ನ 12ಕ್ಕೆ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ, ಸಂಜೆ 4.30ಕ್ಕೆ ಪಟ್ಟಣದ ಎಲ್ಲಾ ದೇವರುಗಳ ಸಮ್ಮುಖದಲ್ಲಿ ಶ್ರೀ ಬೀರಲಿಂಗೇಶ್ವರ ಕಾರ್ಣಿಕ ಹಾಗೂ ಶ್ರೀ ಬಸವೇಶ್ವರ ಸ್ವಾಮಿಯ ರಥೋತ್ಸವ ಜರುಗಲಿದೆ.

ದಿನಾಂಕ 25ರ ಶನಿವಾರ ಬೆಳಿಗ್ಗೆ 6 ಗಂಟೆಗೆ ವಿವಿಧ ಪೂಜೆ, 10 ಗಂಟೆಯಿಂದ ಸಂಜೆಯವರೆಗೆ ಜವಳ, ದಿಂಡು ಉರುಳು ಸೇವೆ, ರಾತ್ರಿ 8ಕ್ಕೆ ಓಕುಳಿ ನಂತರ ದೇವರುಗಳನ್ನು ಆಯಾ ದೇವಸ್ಥಾನಗಳಿಗೆ ಬೀಳ್ಕೊಡುವ ಮೂಲಕ ಜಾತ್ರೆಗೆ ತೆರೆ ಎಳೆಯಲಾ ಗುವುದು ಎಂದು ಕೆ.ಜಿ.ಪರಮೇಶ್ವರಪ್ಪ ಹೇಳಿದರು.

error: Content is protected !!