ಮಲೇಬೆನ್ನೂರು : ವಿವಿಧ ಕಾಮಗಾರಿಗಳಿಗೆ ಚಾಲನೆ

ಮಲೇಬೆನ್ನೂರು : ವಿವಿಧ ಕಾಮಗಾರಿಗಳಿಗೆ ಚಾಲನೆ

ಮಲೇಬೆನ್ನೂರು, ಫೆ.10- ಪಟ್ಟಣದ ಪುರಸಭೆ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ (7, 19, 22, 23ನೇ ವಾರ್ಡ್‌ಗಳಲ್ಲಿ) ನಗರೋತ್ಥಾನ ಹಂತ -4ರ ಅಡಿಯಲ್ಲಿ ಸಿಸಿ ರಸ್ತೆ ಮತ್ತು ಸಿಸಿ ಚರಂಡಿಗಳ ನಿರ್ಮಾಣ ಕಾಮಗಾರಿಗಳಿಗೆ ಶಾಸಕ ಎಸ್.ರಾಮಪ್ಪ ಅವರು ಬುಧವಾರ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು. 

ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ಪುರಸಭೆ ಸದಸ್ಯರಾದ ಶ್ರೀಮತಿ ವಿಜಯಲಕ್ಷ್ಮಿ, ದಾದಾಪೀರ್, ಷಾ ಅಬ್ರಾರ್, ಭೋವಿ ಶಿವು, ಕೆ.ಜಿ.ಲೋಕೇಶ್, ಟಿ.ಹನುಮಂತಪ್ಪ, ಚಮನ್ ಷಾ, ಬಿ.ಸುರೇಶ್, ಭೋವಿಕುಮಾರ್, ಪೂಜಾರ್ ದೇವರಾಜ್, ಡಿ.ಕೆ.ಸಿದ್ದನಗೌಡ, ಜನತಾ ಬಜಾರ್ ನಿರ್ದೇಶಕ ಪಿ.ಹೆಚ್.ಶಿವಕುಮಾರ್, ಪುರಸಭೆ ಮುಖ್ಯಾಧಿಕಾರಿ ಎ.ಸುರೇಶ್, ಇಂಜಿನಿಯರ್ ಹಾಲೇಶಪ್ಪ ಹಾಗೂ ಮತ್ತಿತರರು ಈ ವೇಳೆ ಹಾಜರಿದ್ದರು.

error: Content is protected !!