ಹರಿಹರ, ನ. 11- ನಗರದಲ್ಲಿ ಹೊಸದಾಗಿ ಮಂಜೂರಾದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿುಲಯದಲ್ಲಿ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶಾಸಕ ಬಿ.ಪಿ. ಹರೀಶ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕೆ.ಹೆಚ್. ಗಾಯತ್ರಿ, ತಾಲ್ಲೂಕು ಅಧಿಕಾರಿ ಆಸ್ಮಾಬಾನು, ವಿಸ್ತರಣಾಧಿಕಾರಿ ಹೆಚ್.ಬಿ. ಪಾಟೀಲ್, ನಿಲಯ ಪಾಲಕರಾದ ಪಿ. ರಂಗನಾಥ್, ಎಂ.ಎನ್. ಹೇಮಾವತಿ, ಎ.ಎಂ. ಯಶೋಧಮ್ಮ, ನಿಲಯ ಮೇಲ್ವಿಚಾರಕರಾದ ಎಸ್.ಪಿ. ಸುಮಲತಾ, ಎಂ. ಮಲ್ಲಿಕಾರ್ಜುನಯ್ಯ, ಸಿ. ಖಾಲಿದ್ ಅನ್ವರ್, ತಾಲ್ಲೂಕು ಕಚೇರಿ ಸಿಬ್ಬಂದಿಗಳಾದ ಹೆಚ್.ಎನ್. ಸಂಪತ್ ಕುಮಾರ್, ಜಿ.ಹೆಚ್. ಶಿವಕುಮಾರ್ ಮತ್ತಿತರರು ಭಾಗವಹಿಸಿದ್ದರು.