ಹರಿಹರ : ಬಾಲ್ಯದ ದಿನಗಳಲ್ಲಿ ಉತ್ತಮ ಗೆಳೆಯರ ಸಹವಾಸ ಬೇಕು

ಹರಿಹರ : ಬಾಲ್ಯದ ದಿನಗಳಲ್ಲಿ ಉತ್ತಮ ಗೆಳೆಯರ ಸಹವಾಸ ಬೇಕು

ಹರಿಹರ, ಜ. 6- ಬಾಲ್ಯದ ದಿನಗಳಲ್ಲಿ   ಉತ್ತಮ ಗೆಳೆಯರನ್ನು ಹೊಂದಿದರೆ ಮುಂದಿನ ದಿನಗಳಲ್ಲಿ ಬದುಕು ಉನ್ನತ ಮಟ್ಟದಲ್ಲಿ ಸಾಗುತ್ತದೆ ಎಂದು ವ್ಯಾಪಾರೋದ್ಯಮಿ ಬೊಂಗಾಳೆ ಜಗನ್ನಾಥರಾವ್ ಅಭಿಪ್ರಾಯಪಟ್ಟರು.

ಇಲ್ಲಿನ ವಿದ್ಯಾನಗರ ಬಡಾವಣೆಯಲ್ಲಿ ನಡೆದ ಕರ್ನಾಟಕ ವಿಶ್ವ ವಿದ್ಯಾಲಯದ 1969-71 ನೇ ಸಾಲಿನ ಸಸ್ಯಶಾಸ್ತ್ರ ವಿಭಾಗದ ಸ್ನೇಹಿತರ  52ನೇ ವರ್ಷದ ಸಮ್ಮಿಲನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಓದುವ ವೇಳೆ ಸಹಪಾಠಿಗಳ ಜೊತೆಯಲ್ಲಿ ಕ್ರೀಡೆ, ಹಾಡು, ಸಂಗೀತ, ನೃತ್ಯ, ನಾಟಕ ಸೇರಿದಂತೆ ವಿವಿಧ ಸಂಸ್ಕೃತಿಯ ಹವ್ಯಾಸವನ್ನು ಹೊಂದಿದ್ದರಿಂದ 52 ವರ್ಷ ಗಳ ಸ್ನೇಹಿತರು ಸಮ್ಮಿಲನವನ್ನು ಮಾಡಿಕೊಳ್ಳು ವಂತಹ ಸೌಭಾಗ್ಯ ಒದಗಿಬಂದಿತು.   ಎಸ್.ಜೆ.ವಿ.ಪಿ. ಕಾಲೇಜಿನಲ್ಲಿ ಎಂ.ಎಸ್ಸಿ. ಬಿಎಡ್ ಪದವಿಯನ್ನು ಪಡೆದು, ಹಿರಿಯರ ಸಹಕಾರ ದೊಂದಿಗೆ ಹಾರ್ಡ್ ವೇರ್ ಅಂಗಡಿ ವ್ಯಾಪಾರ ವಹಿವಾಟು ಆರಂಭಿಸಿ ಬಿರ್ಲಾ, ಕಿರ್ಲೋಸ್ಕರ್ ಕಂಪನಿಯವರ ಜೊತೆಯಲ್ಲಿ ಉತ್ತಮ ಒಡನಾಟ ಹೊಂದಿದ ಪರಿಣಾಮ ದಾವಣಗೆರೆ ನಗರದಲ್ಲಿ ಪೂಜಾ ಇಂಟರ್ ನ್ಯಾಷನಲ್ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡ ಪರಿಣಾಮ 1996 ರಲ್ಲಿ ಭಾರತೀಯ `ಉದ್ಯೋಗ ರತ್ನ’ ಪ್ರಶಸ್ತಿಯನ್ನು ಪಡೆಯುವುದು ಸಾಧ್ಯವಾಯಿತು ಎಂದು ಅವರು ಹೇಳಿದರು.

ನಮ್ಮ ಕುಟುಂಬದ ಸದಸ್ಯರಾದ ಬೊಂಗಾಳೆ ಕಾಳಪ್ಪನವರು ಕೂಡ 1981ರಲ್ಲಿ ಔಷಧಿ ವ್ಯಾಪಾರ ವಹಿವಾಟು ಆರಂಭಿಸಿ, ಅವರು ಕೂಡ ಇತ್ತೀಚಿನ ದಿನಗಳಲ್ಲಿ ನ್ಯಾಷನಲ್ ಅವಾರ್ಡ್, ಮದ್ರಾಸಿನ ಮದರ್‌ ತೆರೇಸಾ ಪ್ರಶಸ್ತಿಯನ್ನು ಪಡೆದಿದ್ದಾರೆ ಎಂದು ವಿವರಿಸಿದರು.    

ಈ ಸಂದರ್ಭದಲ್ಲಿ ಬೊಂಗಾಳೆ ಕಾಳಪ್ಪ, ಬೊಂಗಾಳೆ ರಾಘವೇಂದ್ರ, ಬೊಂಗಾಳೆ ಜ್ಞಾನೇಶ್ವರ, ಎಂ.ಸಿ. ಗಾಯತ್ರಿ, ಡಾ. ಶಿವಕುಮಾರ್, ಲಕ್ಷ್ಮಣ ಶಿಕಾರಿಪುರ, ಲಕ್ಷ್ಮೀಕಾಂತ್ ಶಿವಮೊಗ್ಗ, ಮಧುಕೇಶ್ವರ ಶಿಕಾರಿಪುರ, ಕೆ.ವಿ. ಹುಲಕೋಟಿ ಹುಬ್ಬಳ್ಳಿ, ಡಾ. ಸಿ.ಡಿ. ಪಾಟೀಲ್, ಡಾ. ರಾಜಣ್ಣ, ಸಾಸಲತ್ತಿ, ಮಾಲತಿ, ಇಂದ್ರಮ್ಮ, ಕಾತ್ಯಾಯಿನಿ, ಕರ್ಣೇಕರ್, ಜಿ.ಎನ್.ವಿ. ಪಾಟೀಲ್, ಬೆಲ್ಲದನವರ್, ವಿ. ರಾಮಕಾಂತ್, ಶಾಂತ್, ಬಸವರಾಜ್, ಪುನೀತ್ ಬೊಂಗಾಳೆ, ಭೋಜರಾಜ್ ಹೋವಳೆ, ಪ್ರತೀಕ್ ಬೊಂಗಾಳೆ, ಪತ್ರಕರ್ತ  ಎಂ. ಚಿದಾನಂದ ಕಂಚಿಕೇರಿ ಇತರರು ಹಾಜರಿದ್ದರು.

error: Content is protected !!