ಹರಿಹರದಲ್ಲಿ ಇಂದು ಹಿಂದೂ ಮಹಾಗಣಪತಿ ಅದ್ಧೂರಿ ವಿಸರ್ಜನೆ, ಬೃಹತ್ ಶೋಭಾಯಾತ್ರೆ

ಹರಿಹರದಲ್ಲಿ ಇಂದು ಹಿಂದೂ ಮಹಾಗಣಪತಿ ಅದ್ಧೂರಿ ವಿಸರ್ಜನೆ, ಬೃಹತ್ ಶೋಭಾಯಾತ್ರೆ

ಹರಿಹರದಲ್ಲಿ ಇಂದು ಹಿಂದೂ ಮಹಾಗಣಪತಿ ಅದ್ಧೂರಿ ವಿಸರ್ಜನೆ, ಬೃಹತ್ ಶೋಭಾಯಾತ್ರೆ - Janathavaniಹರಿಹರದಲ್ಲಿ ಇಂದು ಹಿಂದೂ ಮಹಾಗಣಪತಿ ಅದ್ಧೂರಿ ವಿಸರ್ಜನೆ, ಬೃಹತ್ ಶೋಭಾಯಾತ್ರೆ - Janathavani

ಹಿಂದೂ ಜಾಗರಣ ವೇದಿಕೆ ಮತ್ತು ಹಿಂದೂ ಮಹಾಗಣಪತಿ ಸೇವಾ ಸಮಿತಿಯ ವತಿಯಿಂದ ಬೃಹತ್ ಶೋಭಾಯಾತ್ರೆ ಮೂಲಕ ಇಂದು ಗಣೇಶ ವಿಸರ್ಜನೆ ಮಾಡಲಾಗುವುದು.

ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ನಗರದ ಹಲವು ವೃತ್ತಗಳಲ್ಲಿ ದೇಶಕ್ಕಾಗಿ ಕೊಡುಗೆ ನೀಡಿರುವ ಆಂಜನೇಯ ಸ್ವಾಮಿ, ವೀರ ಸಾವರ್ಕರ್, ಛತ್ರಪತಿ ಶಿವಾಜಿ, ಶ್ರೀ ರಾಮ ಲಕ್ಷ್ಮಣ ಸೇರಿದಂತೆ ಮಹಾನ್ ನಾಯಕರ ಭಾವಚಿತ್ರ ಇಡುವ ಮೂಲಕ ಅದ್ದೂರಿ ವಿನಾಯಕ ವಿಸರ್ಜನೆಗೆ ನಗರ ಸಿದ್ದಗೊಂಡಿದೆ. 

ಗಾಂಧಿ ವೃತ್ತದಲ್ಲಿ ಛತ್ರಪತಿ ಶಿವಾಜಿ, ರಾಣಿ ಚೆನ್ನಮ್ಮ ವೃತ್ತದಲ್ಲಿ ವೀರ ಆಂಜನೇಯ ಸ್ವಾಮಿ, ಶಿವಮೊಗ್ಗ ವೃತ್ತದಲ್ಲಿ ಶ್ರೀ ರಾಮ, ಹರಪನಹಳ್ಳಿ ರಸ್ತೆಯಲ್ಲಿ ವೀರ ಸಾವರ್ಕರ್ ಸೇರಿದಂತೆ ಅನೇಕ ಮಹನೀಯರ ಭಾವಚಿತ್ರಗಳನ್ನು ಅಳವಡಿಸಲಾಗಿದೆ. 

ಗಣೇಶನ ಮೆರವಣಿಗೆ ಸಂಚರಿಸುವ ರಾಜ ಮಾರ್ಗದಲ್ಲಿ ಕೇಸರಿ ಧ್ವಜ ಮತ್ತು  ಬಂಟಿಂಗ್ಸ್‌, ಬ್ಯಾನರ್ ಹಾಕಿ ಶೃಂಗಾರ ಮಾಡಲಾಗಿದೆ. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತರಿಗೆ ಗಾಂಧಿ ಮೈದಾನದಲ್ಲಿ, ರಾಣಿ ಚೆನ್ನಮ್ಮ ವೃತ್ತದಲ್ಲಿ, ಪಕ್ಕೀರಸ್ವಾಮಿ ಮಠದ ಹತ್ತಿರ ಪ್ರಸಾದ ವ್ಯವಸ್ಥೆಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. 

ಸುಮಾರು 30 ಕ್ಕೂ ಹೆಚ್ಚು ಅಡುಗೆ ಭಟ್ಟರು ಪ್ರಸಾದ ತಯಾರಿಸಲಿದ್ದಾರೆ. ಜೊತೆಗೆ 75 ಯುವಕರು ಪ್ರಸಾದ ಬಡಿಸುವವರಿದ್ದು, ಆಗಮಿಸುವ ಭಕ್ತರಿಗೆ ಊಟ ಮತ್ತು ಕುಡಿಯುವ ನೀರಿನ ಕೊರತೆ ಬರದಂತೆ ವ್ಯವಸ್ಥೆ ಮಾಡಲಿದ್ದಾರೆ.

ಮೆರವಣಿಗೆ ನಡೆಯುವ ಸಂದರ್ಭದಲ್ಲಿ ಯಾವುದೇ ರೀತಿಯ ಅವಘಡ ನಡೆಯದಂತೆ ತಡೆಯಲು ಮೆರವಣಿಗೆ ಮಾರ್ಗದಲ್ಲಿ ಅತಿ ಸೂಕ್ಷ್ಮಸ್ಥಳ ಗುರುತಿಸಿ 20 ಕಡೆಗಳಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಲಾಗಿದೆ. 20 ಪಿಎಸ್ಐ, 6 ಸಿಪಿಐ, ಒಬ್ಬರು ಡಿವೈಎಸ್ಪಿ, ಒಬ್ಬರು ಅಡಿಷನಲ್  ಎಸ್ಪಿ ಸೇರಿದಂತೆ 165 ಪೊಲೀಸ್ ಸಿಬ್ಬಂದಿಗಳು, 135 ಹೋಮ್ ಗಾರ್ಡ್ ಜೊತೆಗೆ ಕೆ.ಎಸ್. ಆರ್.ಪಿ. ತುಕಡಿ ವಿಶೇಷ ಪೊಲೀಸ್ ಪಡೆಗಳ ನಿಯೋಜನೆ ಮಾಡಲಾಗಿದೆ.

ಹಿಂದೂ ಮಹಾಗಣಪತಿ ವಿಸರ್ಜನೆ ಕಾರ್ಯವನ್ನು ಶಾಂತಿಯುತವಾಗಿ ನೆರವೇರಿಸಲು ಎಲ್ಲಾ ರೀತಿಯ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಮಹಿಳೆಯರ ಬೃಹತ್ ಜಾಥಾ ಹಾಗೂ ಬೈಕ್
ರಾಲಿ ನಡೆಸಲಿದ್ದು, ವಿಸರ್ಜನೆಯ ವೇಳೆ ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿಸುವಂತೆ ಹಿಂದೂ ಮಹಾಗಣಪತಿ ಉತ್ಸವ ಸಮಿತಿಯ ಅಧ್ಯಕ್ಷ ಎ.ಬಿ. ವಿಜಯಕುಮಾರ್ ಮನವಿ ಮಾಡಿದ್ದಾರೆ. 

ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು  ರಜಾ ಇರೋದರಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಳ್ಳಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಮಹಿಳೆಯರಿಗೆ ಪ್ರತ್ಯೇಕ್ಷವಾಗಿ ಡಿ.ಜೆ. ಸೌಂಡ್ ಸಿಸ್ಟಮ್ ವ್ಯವಸ್ಥೆ ಕಲ್ಪಿಸಿರುವುದರಿಂದ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. 

ಹಿಂದೂ ಮಹಾಗಣಪತಿ ವಿಸರ್ಜನೆ ಕಾರ್ಯದಲ್ಲಿ ಸಾರ್ವಜನಿಕರಿಗೆ, ವಾಹನ ಸವಾರರಿಗೆ ಯಾವುದೇ ರೀತಿಯ ತೊಂದರೆಗಳು ಆಗದಂತೆ ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಪೊಲೀಸ್ ಇಲಾಖೆ ಕೈಗೊಂಡಿದೆ ಎಂದು ಪಿಎಸ್ಐ ದೇವಾನಂದ್ ತಿಳಿಸಿದ್ದಾರೆ.   

error: Content is protected !!