ಮಲೇಬೆನ್ನೂರು ಜೂ 23 – ಉತ್ತಮ ಮಳೆ -ಬೆಳೆಗಾಗಿ ಪ್ರಾರ್ಥಿಸಿ ಜಿಗಳಿ ಗ್ರಾಮದಲ್ಲಿ ಶುಕ್ರವಾರ ಅಜ್ಜಿ ಹಬ್ಬವನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.
ಮಹಿಳೆಯರು ಮನೆಯಲ್ಲಿ ಮಣ್ಣಿನ ಕುಡಿಕಿಗೆ ನೀರು ಹಾಕಿ, ಬೇವಿನ ಸೊಪ್ಪು, ವೀಳೈದೆಲೆ, ಅರಿಸಿಣ -ಕುಂಕುಮ, ಹಸಿರು ಬಳೆ ಇಟ್ಟು ಹೋಳಿಗೆ ಎಡೆ ಹಾಕಿ ಪೂಜೆ ಸಲ್ಲಿಸಿದ ನಂತರ ಬರಿಗಾಲಿನಿಂದ ನಡೆದುಕೊಂಡು ಬೇವಿನಕಟ್ಟೆಗೆ ತೆರಳಿ ಮೂರು ಸುತ್ತು ಪ್ರದಕ್ಷಣೆ ಹಾಕಿ ಅಜ್ಜಿ ಕುಡಿಕೆಯನ್ನು ಅಲ್ಲಿಟ್ಟು ಪ್ರಾರ್ಥನೆ ಸಲ್ಲಿಸುವುದೇ ಅಜ್ಜಿ ಹಬ್ಬದ ಆಚರಣೆ ಆಗಿದೆ. ಇದರ ಮುಂದುವರೆದ ಭಾಗವಾಗಿ ಮಂಗಳವಾರ ಆಷಾಢ ಹಬ್ಬವನ್ನೂ ಆಚರಿಸಲಾಗುವುದು.