ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಜೀವಿಸಬೇಕು

ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಜೀವಿಸಬೇಕು

ಹರಪನಹಳ್ಳಿಯ ಸಿವಿಲ್ ನ್ಯಾಯಾಧೀಶರಾದ ಫಕ್ಕೀರವ್ವ ಕೆಳಗೇರಿ

ಹರಪನಹಳ್ಳಿ, ಫೆ. 22 – ಯಾವುದೇ ವ್ಯಕ್ತಿ ತನ್ನ ಹಕ್ಕಿನಿಂದ ವಂಚಿತನಾಗದಂತೆ ನೋಡಿಕೊಳ್ಳುವುದು ಸಾಮಾಜಿಕ ನ್ಯಾಯದ ಪರಿಕಲ್ಪನೆಯಾಗಿದೆ ಎಂದು ಸಿವಿಲ್ ನ್ಯಾಯಾಧೀಶರಾದ ಫಕ್ಕೀರವ್ವ ಕೆಳಗೇರಿ ಹೇಳಿದರು.

ಪಟ್ಟಣದ ನಿಸರ್ಗ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ನಿಸರ್ಗ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಕುರಿತು ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬ ಪ್ರಜೆಗೂ ಪ್ರತಿಯೊಂದು ಕಾನೂನು ಹೇಗೆ ಅನ್ವಯವಾಗುತ್ತವೆಯೋ, ಹಾಗೆ ಪ್ರತಿಯೊಂದು ಹಕ್ಕುಗಳು ತಲುಪಿ ವೆಯಾ, ತಲುಪದೆ ಇದ್ದರೆ ತಲುಪುವ ಹಾಗೆ ನೋಡಿಕೊಳ್ಳುವುದು ಸಾಮಾಜಿಕ ನ್ಯಾಯ ವಾಗಿದೆ. ಎಲ್ಲರೂ ಸಂವಿಧಾನದಡಿಯಲ್ಲಿ ರುವ ಮೂಲಭೂತ ಹಕ್ಕುಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಅದೇ ರೀತಿಯಾಗಿ ಕರ್ತವ್ಯವನ್ನು ಸಹ ಚಾಚು ತಪ್ಪದೆ ಪಾಲನೆ ಮಾಡಬೇಕು ಎಂದ ಅವರು, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು, ಉತ್ತಮ ವ್ಯಕ್ತಿಗಳಾಗಿ ತಂದೆ, ತಾಯಿ ಹಾಗೂ ನೆರೆ ಹೊರೆಯವರಿಗೆ ತಾಲ್ಲೂಕಿಗೆ ಕೀರ್ತಿ ತರುವಂತರಾಗಬೇಕು ಎಂದು ಕಿವಿ ಮಾತು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಎಂ. ಅಜ್ಜಣ್ಣ ಮಾತನಾಡಿ, ಹಿಂದಿನಿಂದಲೂ ನಾಗರೀಕತೆ ಸಮಾಜ ಬೆಳೆದು ಬಂದಿದ್ದು, ಈ ಸಮಾಜದಲ್ಲಿ ಸಾಮಾಜಿಕ ನ್ಯಾಯ ಅಗತ್ಯವಾಗಿದೆ. ಯಾವುದೇ ಜಾತಿ, ಮತ, ಬೇಧವಿಲ್ಲ, ಮೇಲು, ಕೀಳು ಎನ್ನುವ ಭಾವ ಇಲ್ಲದೇ ತಾರತಮ್ಯ ಆಗದಂತೆ ಸಾಮರಸ್ಯದಿಂದ, ಸಾಮಾಜಿಕ ನ್ಯಾಯದಡಿಯಲ್ಲಿ ಜೀವಿಸೋಣ ಎಂದರು.

ಅಪರ ಸರ್ಕಾರಿ ವಕೀಲ ವಿ.ಜಿ. ಪ್ರಕಾಶ ಗೌಡ ಮಾತನಾಡಿದರು. ಶರಣ ಬಸವ, ಬುದ್ಧ ಭೀಮಜೀ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಗುಂಡಗತ್ತಿ ಕೆ. ಕೊಟ್ರಪ್ಪ, ಸಹಾಯಕ ಸರ್ಕಾರಿ ಅಭಿಯೋಜಕಿ ಎನ್. ಮೀನಾಕ್ಷಿ, ವಕೀಲರ ಸಂಘದ ಕಾರ್ಯ ದರ್ಶಿ ಕೆ. ಆನಂದ, ಪ್ರಾಚಾರ್ಯ ಆರ್.ಹೆಚ್. ಕಲ್ಯಾಣದವರ್, ವಕೀಲರಾದ ಮೃತ್ಯುಂಜಯ, ಬಿ. ಸಿದ್ದೇಶ್, ನಾಗರಾಜ ನಾಯ್ಕ, ಬಸವರಾಜ, ಕೊಟ್ರೇಶ್, ಕಾಲೇಜು ಸಿಬ್ಬಂದಿ ಇತರರು ಇದ್ದರು.

error: Content is protected !!