ವಿಜಯನಗರ ಜಿಲ್ಲೆಯಲ್ಲಿ ಜ.18 ರಿಂದ ಗ್ರಾಮ ವಾಸ್ತವ್ಯ

ವಿಜಯನಗರ ಜಿಲ್ಲೆಯಲ್ಲಿ  ಜ.18 ರಿಂದ ಗ್ರಾಮ ವಾಸ್ತವ್ಯ

ಹರಪನಹಳ್ಳಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಎಸ್ಪಿ ಶ್ರೀಹರಿಬಾಬು

ಹರಪನಹಳ್ಳಿ, ಡಿ. 2-  ವಿಜಯನಗರ ಜಿಲ್ಲೆ ಯಲ್ಲಿ 356 ಹಳ್ಳಿಗ ಳ್ಳಿದ್ದು, ಹಂತ ಹಂತವಾಗಿ ಪ್ರತಿ ತಾಲ್ಲೂಕಿನ ಹಳ್ಳಿ ಗಳಲ್ಲಿ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಹಳ್ಳಿಗಳಲ್ಲಿ ರುವ ಸಮಸ್ಯೆ ಗಳನ್ನು ಬಗೆಹರಿ ಸುವ ಕಾರ್ಯವನ್ನು ಜನ ವರಿ 18ರಿಂದ ಹಮ್ಮಿಕೊಳ್ಳ ಲಾಗುವುದು ಎಂದು ವಿಜಯನಗರ ಎಸ್ಪಿ ಶ್ರೀಹರಿಬಾಬು ಹೇಳಿದರು. ಪಟ್ಟಣದ ನೂತನ ಪೊಲೀಸ್ ಠಾಣೆಯ ಮುಂಬಾಗ ದಲ್ಲಿ ನೂತನ ಉಧ್ಯಾನವನದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಿಲ್ಲೆಯ ಮೊದಲ ಹಂತದಲ್ಲಿ 50 ಹಳ್ಳಿಗಳನ್ನು ಆಯ್ಕೆಮಾಡಿ ಕೊಂಡು, ತಾಲ್ಲೂಕಿನ 10 ಹಳ್ಳಿಗಳಲ್ಲಿ ವಾಸ್ತವ್ಯ ಮಾಡುವ ಮೂಲಕ ಅಲ್ಲಿಯ ಜನರಿಗೆ   ಸೈಬರ್ ಕ್ರೈಮ್ ಬಾಲ್ಯವಿವಾಹ, ಪೋಕ್ಸೋ ಕಾಯ್ದೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುವುದು ಎಂದರು. 

ಜಿಲ್ಲೆಯಲ್ಲಿ ನೂತನವಾಗಿ 273  ಪೊಲೀಸ್ ವಸತಿ ಗೃಹಗಳನ್ನು ನಿರ್ಮಾಣ ಮಾಡುವ ಗುರಿ ಇದ್ದು,  ಹರಪನಹಳ್ಳಿ ತಾಲ್ಲೂಕಿನ  ಹಲವಾಗಲು, ಅರಸಿಕೇರಿ, ಚಿಗಟೇರಿ, ಹರಪನಹಳ್ಳಿಗಳಲ್ಲಿ  90 ವಸತಿ ಗೃಹಗಳನ್ನು ಪೊಲೀಸ್ ವಸತಿ ಗೃಹಗಳ ವತಿಯಿಂದ ಕಟ್ಟಡ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.  ಪಟ್ಟಣದಲ್ಲಿ ಟ್ರಾಫಿಕ್ ಸುಧಾರಣೆ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಈ ವೇಳೆ ಸಿಪಿಐ ನಾಗರಾಜ ಕಮ್ಮಾರ ಸೇರಿದಂತೆ ಇತರರಿದ್ದರು.

error: Content is protected !!