ಬಡ ಜನತೆಯ ಕಷ್ಟ ಸುಖಗಳಿಗೆ ಯಾರು ಸ್ಪಂದಿಸುತ್ತಾರೋ, ಅಂತವರಿಗೆ ಬೆಂಬಲ

ಬಡ ಜನತೆಯ ಕಷ್ಟ ಸುಖಗಳಿಗೆ ಯಾರು ಸ್ಪಂದಿಸುತ್ತಾರೋ, ಅಂತವರಿಗೆ ಬೆಂಬಲ

ಹರಪನಹಳ್ಳಿ ಶಾಸಕರಾದ ಎಂ.ಪಿ. ಲತಾ ಮಲ್ಲಿಕಾರ್ಜುನ್‌

ಹರಪನಹಳ್ಳಿ,ಜೂ. 9 – ಬಡ ಹಾಗೂ ಜನಸಾಮಾನ್ಯ ಕಕ್ಷಿದಾರರನ್ನು ವಿನಾಕಾರಣ ಅಲೆದಾಡಿಸದೆ ಅವರಿಗೆ ತ್ವರಿತವಾಗಿ ನ್ಯಾಯವನ್ನು ಕೊಡಿಸುವ ಕೆಲಸವನ್ನು ವಕೀಲರು ಮಾಡಬೇಕು ಎಂದು ಶಾಸಕರಾದ ಎಂ.ಪಿ. ಲತಾ ಮಲ್ಲಿಕಾರ್ಜುನ್‌ ಹೇಳಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದ ಕಚೇರಿಯಲ್ಲಿ ತಾಲ್ಲೂಕು ವಕೀಲರ ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಾಲ್ಲೂಕಿನ ಬಡ ಜನತೆಯ ಕಷ್ಟ-ಸುಖಗಳಿಗೆ ಯಾರು ಸ್ಪಂದಿಸುತ್ತಾರೋ, ಅಂತವರಿಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದರು.

ನಮ್ಮ ತಂದೆ ಎಂ.ಪಿ. ಪ್ರಕಾಶ್ ಅವರೂ ಸಹ ವಕೀಲ ವೃತ್ತಿಯಿಂದ ಜೀವನ ಆರಂಭಿಸಿ ರಾಜಕೀಯ, ಸಾಂಸ್ಕೃತಿಕವಾಗಿ ಅಭಿವೃದ್ಧಿಗೆ ಸಹಕರಿಸಿದ್ದಾರೆ. ಅದೇ ರೀತಿಯಾಗಿ ನಾನು ನಿಮ್ಮ ಬೆಂಬಲಕ್ಕೆ ಇರುತ್ತೇನೆ ಎಂದ ಅವರು      ನೂತನ ನ್ಯಾಯಾಲಯ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದ್ದು, ರಸ್ತೆ ಮತ್ತು ಕುಡಿಯುವ ನೀರಿನ ಬೇಡಿಕೆಯನ್ನು ಶೀಘ್ರವೇ ಈಡೇರಿಸಲಾಗುವುದು. ಇದರ ಜೊತೆಗೆ ಉಳಿದ ನಿಮ್ಮ ಬೇಡಿಕೆಗಳನ್ನು ಹಂತ ಹಂತವಾಗಿ ಮಾಡಿಕೊಡುವುದಾಗಿ ಭರವಸೆ ನೀಡಿದರು..

ವಕೀಲರ ಸಂಘದ ಅಧ್ಯಕ್ಷ ಎಂ.ಅಜ್ಜಣ್ಣ ಮಾತನಾಡಿ, ನ್ಯಾಯಾಲಯವು ಸುಸಜ್ಜಿತವಾಗಿ ನಿರ್ಮಾಣವಾಗುತ್ತಿದೆ, ಅದಕ್ಕೆ ಬೇಕಾಗುವ ಎಲ್ಲಾ ರೀತಿಯ ಮೂಲಸೌಕರ್ಯಗಳನ್ನು ಒಳಗೊಂಡು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಕೆ.ವೀರುಪಾಕ್ಷಪ್ಪ, ಕಾರ್ಯದರ್ಶಿ ಕೆ.ಆನಂದ ವಕೀಲರಾದ ಕೆ.ಚಂದ್ರೇಗೌಡ, ಕೆ.ಜಗದಪ್ಪ, ಟಿ.ವೆಂಕಟೇಶ್, ಡಿ.ಅಬ್ದುಲ್‍ರೆ ಹಮಾನ್, ಪಿ.ಜಗದೀಶ ಗೌಡ, ಕೋಡಿಹಳ್ಳಿ ಪ್ರಕಾಶ, ವಿಜಿ.ಪ್ರಕಾಶಗೌಡ, ಕೆ.ಲಿಂಗಾನಂದ, ಹಾಲನಗೌಡ, ಪಿ.ರಾಮನಗೌಡ, ಟಿ.ಎಚ್.ಎಂ.ಮಂಜುನಾಥ, ವಾಮದೇವ ಕಮ್ಮತ್ತಹಳ್ಳಿ, ಡಿ.ಹನುಮಂತ, ಕೆ.ದ್ರಾಕ್ಷಾಯಣಮ್ಮ, ಜೆ.ಸೀಮಾ, ಕೊಟ್ರೇಶ, ರೇಣುಕಾ ಮೇಟಿ, ತಿರುಪತಿ, ಕೆಂಗಳ್ಳಿ ಪ್ರಕಾಶ ಸೇರಿದಂತೆ ಇತರರು ಇದ್ದರು.

error: Content is protected !!