ಹರಪನಹಳ್ಳಿ, ಏ.12- ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಸಿ.ಆರ್.ಪಿ.ಎಫ್., ಡಿ.ಎ.ಆರ್ ಮತ್ತು ಪೊಲೀಸ್ ಸಿಬ್ಬಂದಿಗಳಿಂದ ತಾಲ್ಲೂಕಿನ ವಿವಿದ ಗ್ರಾಮಗಳಲ್ಲಿ ಮತದಾರರಿಗೆ, ಯಾರ ಪ್ರಭಾವಕ್ಕೊಳಗಾಗದೆ ಮುಕ್ತವಾಗಿ, ನಿರ್ಭಯವಾಗಿ ತಪ್ಪದೇ ಮತ ಚಲಾಯಿಸುವಂತೆ ಹಾಗೂ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಂಡು ಇಲಾಖೆಗೆ ಸಹಕರಿಸಿ ಕಾನೂನು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಪಥಸಂಚಲನೆ ನಡೆಸಲಾಯಿತು.
ತಾಲ್ಲೂಕಿನ ಸೂಕ್ಷ ಪ್ರದೇಶಗಳಾದ ಕುಂಚೂರು, ಹಲವಾಗಲು, ತೆಲಗಿ, ದುಗ್ಗಾವತಿ ಮತ್ತು ರಾಗಿಮಸಲವಾಡ ಗ್ರಾಮಗಳಲ್ಲಿ ಧ್ವನಿ ವರ್ಧಕದ ಮೂಲಕ ಪಥಸಂಚಲನ ಮಾಡಿ ಮತದಾರರಿಗೆ ಆತ್ಮಸ್ತೈರ್ಯ ತುಂಬುವ ಕಾರ್ಯ ಮಾಡಲಾಯಿತು. ಈ ಸಂದರ್ಭದಲ್ಲಿ ಸಿಪಿಐ ನಾಗರಾಜ ಕಮ್ಮಾರ, ಪಿಎಸ್‌ಐ ಗುರುರಾಜ್, ಎಎಸ್‌ಐ ನಿಂಗಪ್ಪ, ಮಲ್ಲಿಕಾರ್ಜುನ ನಾಯ್ಕ ಸಿಬ್ಬಂದಿಗಳಾದ ಹೊನ್ನಪ್ಪ ಸೇರಿದಂತೆ ಇತರರು ಪಥಸಂಚಲನದಲ್ಲಿ ಭಾಗವಹಿಸಿದ್ದರು.