ಕೇವಲ ಅಧಿಕಾರಿಗಳಿಂದ ಕಲೆ, ಕಲಾವಿದರನ್ನು ಉಳಿಸಲು ಸಾಧ್ಯವಿಲ್ಲ

ಹರಪನಹಳ್ಳಿ, ಸೆ.8- ಕೇವಲ ಅಧಿಕಾರಿ ಗಳಿಂದ ಕಲೆ, ಕಲಾವಿದರನ್ನು ಉಳಿಸಲು ಸಾಧ್ಯ ವಿಲ್ಲ. ಇದಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು  ಬೆಂಗಳೂರು ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ಎಚ್.ಎಸ್. ಶಿವರುದ್ರಪ್ಪ  ಹೇಳಿದರು.

ಪಟ್ಟಣದ ಕಾಶಿಮಠ ಬಡಾವಣೆಯ ವಿದ್ಯಾಸಿರಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಸಂಪ್ರದಾಯ ಟ್ರಸ್ಟ್, ಯಕ್ಷಗಾನ ಅಕಾಡೆಮಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹಿಳೆಯರಿಗಾಗಿ ಎರಡು ತಿಂಗಳ ಮೂಡಲಪಾಯ ಯಕ್ಷಗಾನ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಯಕ್ಷಗಾನದ ಮೂಡಲಪಾಯ, ಘಟ್ಟದ ಪ್ರಾಯ, ಕೇಳಿಕೆಯಂತಹ ಕಲೆಗಳು ಕಣ್ಮರೆ ಆಗುತ್ತಿವೆ. ಅವುಗಳ ರಕ್ಷಣೆಗೆ ಅಕಾಡೆಮಿ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಪ್ರಸಕ್ತ ವರ್ಷ ಸಮಸ್ತರು ಅಭಿನಯದ ಏಕಲವ್ಯ ತಂಡ ಗೋವಾ ಮತ್ತು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಯ್ಕೆಯಾಗಿದೆ ಎಂದು ಹೇಳಿದರು. 

ವಿದ್ಯಾಸಿರಿ ಪೂರ್ವ ಪ್ರಾಥಮಿಕ ಶಾಲೆಯ ಕಾರ್ಯದರ್ಶಿ ಶೈಲಾ ವೀರೇಶ್ ಉದ್ಘಾಟನೆ ನೆರವೇರಿಸಿ ಮಾತನಾಡಿ, ಆಸಕ್ತಿ, ಏಕಾಗ್ರತೆ ಯಿಂದ ಕಲಿಯಬೇಕು. ಮಹಿಳೆಯರು ತಮ್ಮಲ್ಲಿ ರುವ ಪ್ರತಿಭೆಯನ್ನು ಹೊರಹಾಕಲು ಹಿಂಜರಿಕೆ ಬಿಡಬೇಕು ಎಂದು ಸಲಹೆ ನೀಡಿದರು. 

ಇದೇ ಸಂದರ್ಭದಲ್ಲಿ ಹಾವೇರಿ ರಂಗಕಲಾವಿದೆ ನಂದಾ ಭಜಂತ್ರಿ ಅವರಿಗೆ ಪ್ರಶಸ್ತಿ, ಫಲಕ ನೀಡಿ ಗೌರವಿಸಲಾಯಿತು. ಜೆಸಿಐ ಸ್ಪೂರ್ತಿ ಸಂಸ್ಥೆ ಅಧ್ಯಕ್ಷ ಡಿ.ವಿಶ್ವನಾಥ, ಕಲಾವಿದ ಎನ್.ಎಸ್.ರಾಜು, ಶಿಬಿರದ ಶಿಕ್ಷಕ ಬಿ.ಪರಶುರಾಮ್, ಸಹ ಶಿಕ್ಷಕಿ  ಶಿಲ್ಪಾ, ಉಪನ್ಯಾಸಕ ಆನಂದ ಕರುವಿನ, ಇಟ್ಟಿಗಿ ವೀರೇಶ್,  ಕವಿತ ಹಾಗೂ ಶಿಬಿರಾರ್ಥಿಗಳಿದ್ದರು.

error: Content is protected !!