ಜಗಳೂರು, ಜು. 19- ಕೊರೊನಾ ವಾರಿ ಯರ್ಸ್‍ಗ ಳಾಗಿ ಜನರ ನಡುವೆ ನಿತ್ಯ ಕೆಲಸ ಮಾಡುವ ಪತ್ರಕರ್ತ ರಿಗೆ ಜೀವನ ಭದ್ರತೆ, ಆರೋಗ್ಯ ವಿಮೆ ಅವಶ್ಯ ಕವಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್ವರಪ್ಪ ಹೇಳಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ನಿನ್ನೆ ಏರ್ಪಾಡಾಗಿದ್ದ ಸರಳ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಕಾರ್ಯನಿರತ ಪತ್ರಕರ್ತರಿಗೆ ಎನ್95 ಮಾಸ್ಕ್, ಸ್ಯಾನಿಟೈಜರ್ ವಿತರಿಸಿ ಅವರು ಮಾತನಾಡಿದರು.
ಸುದ್ದಿ ಮಾಡುವ ವೇಳೆ ಕೆಲವು ಪತ್ರಕರ್ತರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 5 ಲಕ್ಷ ರೂ. ಪರಿಹಾರ ನೀಡಲು ಶಿಫಾರಸ್ಸು ಮಾಡಿದ್ದಾರೆ. ಹಾಗೆಯೇ ತಾಲ್ಲೂಕು ಮತ್ತು ಗ್ರಾಮೀಣ ಭಾಗದ ಪತ್ರಕರ್ತರಿಗೂ ಮೂಲಭೂತ ಸೌಲಭ್ಯಗಳನ್ನು ನೀಡಬೇಕು ಎಂದರು.
ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿದಾನಂದ ಜಿ.ಎಸ್. ಮಾತನಾಡಿ, ಕೊರೊನಾ ಲಾಕ್‍ಡೌನ್ ಆರಂಭದ ದಿನದಿಂದಲೂ ಇಂದಿನವರೆಗೂ ದಿನವಿಡೀ ಕೊರೊನಾ ವಾರಿಯರ್ಸ್‍ಗಳಾಗಿ ನಿತ್ಯ ಜನರ ನಡುವೆ ಇದ್ದು, ಪತ್ರಕರ್ತರು ಕೆಲಸ ಮಾಡುತ್ತಿದ್ದಾರೆ. ತಾಲ್ಲೂಕು ಆಡಳಿತ ಕೂಡ ಎನ್95 ಮಾಸ್ಕ್ ವಿತರಿಸಲಿಲ್ಲ, ಆದರೆ, ಇಂದು ಎಲ್ಲಾ ಪತ್ರಕರ್ತರಿಗೆ ಎನ್95 ಮಾಸ್ಕ್, ಸ್ಯಾನಿಟೈಜರ್ ಗಳನ್ನು ಮಹೇಶ್ವರಪ್ಪ ವಿತರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತ ಬಿ.ಪಿ. ಸುಭಾನ್ ಮಾತನಾಡಿ, ಸೇವಾ ಮನೋಭಾವ ವಿಟ್ಟುಕೊಂಡು ಬೆಳೆದಿರುವ ಮಹೇಶ್ವರಪ್ಪ, ಬಡವರು, ನಿರ್ಗತಿಕರನ್ನು ಕಂಡರೆ ಸಾಕು ತಮ್ಮಿಂದ ಕೈಲಾದಷ್ಟು ಸಹಾಯ ಮಾಡುವ ದೊಡ್ಡ ವ್ಯಕ್ತಿತ್ವ ಅವರದ್ದಾಗಿದೆ. ಇಂತಹ ಅಧಿಕಾರಿಗಳ ಸೇವೆ ಅವಶ್ಯಕವಾಗಿದೆ ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಲೋಕೇಶ್ ಎಂ. ಐಹೊಳೆ, ಸಿ.ಬಸವರಾಜ್, ಎಚ್.ಆರ್. ಬಸವರಾಜ್, ಮಂಜಪ್ಪ, ರವಿಕುಮಾರ್, ಧನ್ಯಕುಮಾರ್, ತಿಪ್ಪೇಸ್ವಾಮಿ, ಬಾಬು, ಬಸವರಾಜ್, ವಾಸೀಮ್, ರಾಜಪ್ಪ, ರಕೀಬ್, ಮಾರುತಿ ಹಾಗೂ ಮತ್ತಿತರರಿದ್ದರು.