ಹರಪನಹಳ್ಳಿ, ಜು. 19 – ಪಟ್ಟಣದ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ವ್ಯವಹಾರದಲ್ಲಿ 50 ಲಕ್ಷ ರೂ. ಹಗರಣ ನಡೆದಿದೆ ಎಂದು ಶಾಸಕ ಜಿ.ಕರುಣಾಕರ ರೆಡ್ಡಿ ಅವರು ಉಪವಿಭಾಗಾಧಿಕಾರಿ ವಿ.ಕೆ.ಪ್ರಸನ್ನಕುಮಾರ್ ಅವರಿಗೆ ತನಿಖೆ ನಡೆಸುವಂತೆ ಅಧಿಕಾರಿಗಳ ಸಭೆಯಲ್ಲಿ ಆರೋಪ ಮಾಡಿರುವುದು ಖಂಡನೀಯ ಹಾಗೂ ಸತ್ಯಕ್ಕೆ ದೂರ ಎಂದು ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಪಿ. ಮಂಜುನಾಥ ಹೇಳಿದ್ದಾರೆ.
ದೇವಸ್ಥಾನದ ಆವರಣದಲ್ಲಿ ಇಂದು ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇವಸ್ಥಾನ ಸಮಿತಿಯ ವರು 100 ರೂ.ಗಳನ್ನು ಸಹಾ ಅವ್ಯವಹಾರ ಮಾಡಿಲ್ಲ. ಪ್ರಾಮಾಣಿಕವಾಗಿ ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಇಲ್ಲಿಯವರೆಗೂ ದೇವಸ್ಥಾನದ ಹುಂಡಿ ಹಾಗೂ ದೇಣಿಗೆಯಿಂದ ಸಂಗ್ರಹವಾದ ಹಣ ಎಂದೂ 50 ಲಕ್ಷ ರೂ. ಸಂಗ್ರಹ ವಾಗಿಲ್ಲ. ಶಾಸಕ ಕರುಣಾಕರ ರೆಡ್ಡಿ ಅವರು ಚಾಡಿ ಮಾತು ಕೇಳಿ ದೇವ ಸ್ಥಾನದ ಹಾಗೂ ಸಮಿತಿಯ ಬಗ್ಗೆ ಹಗುರವಾಗಿ ಮಾತನಾ ಡುವುದನ್ನು ನಿಲ್ಲಿಸಬೇಕು. ಸಮಿತಿಯವರು ಯಾವುದೇ ರೀತಿಯ ತನಿಖೆಗೆ ಬದ್ಧರಿದ್ದೇವೆ ಎಂದು ಸ್ಪಷ್ಟಪಡಿಸಿದರು.
ತರಕಾರಿ ಮಾರುಕಟ್ಟೆ ಯಲ್ಲಿ ಪುರಸಭೆ ಟೆಂಡರ್ದಾ ರರು ಶಾಸಕರ ಹೆಸರು ಹೇಳಿಕೊಂಡು ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದು, ಅದನ್ನು ತಡೆಹಿಡಿಯಲು ಪುರ ಸಭೆಯ ಅಧಿಕಾರಿಗಳು ಅವರ ಮೇಲೆ ಕ್ರಮ ತೆಗೆದು ಕೊಳ್ಳುವಂತೆ ಸೂಚನೆ ಮಾಡುವುದನ್ನು ಬಿಟ್ಟು ದೇವಸ್ಥಾನದ ಹುಂಡಿಯ ಚಿಕ್ಕ ಹಣಕ್ಕೆ ಕೈಹಾಕಿರುವುದು ಸಮಂಜಸವಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಎಂ. ಸಣ್ಣಹಾಲಪ್ಪ, ಕ್ವಾರಿ ದುರುಗಪ್ಪ, ಎಂ.ಶಂಕರ್, ಡಿ.ಹನುಮಂತ, ಸಿ.ವೆಂಕಟೇಶ, ಬಿ.ನಾಗರಾಜ, ಟಿ.ಹನುಮಂತ, ಡಿ.ದಂಡ್ಯೆಪ್ಪ, ಆರ್.ಹನುಮಂತ, ಎಸ್.ದಾಸಪ್ಪ, ಜಿ.ಕೊಟ್ರೇಶ, ಕೆ.ದುರುಗದಯ್ಯ, ಜಿ.ತಿಪ್ಪೇಶ್, ಟಿ.ಕೆಂಚಪ್ಪ, ಜೆ.ಬಸವರಾಜ, ಕೆ.ಸಿದ್ದಪ್ಪ ಸೇರಿದಂತೆ ಇತರರು ಇದ್ದರು.