ದಾವಣಗೆರೆ, ಜು.19- ಕರ್ನಾಟಕ ಸ್ವರ್ಣಕಾರರ ಸಂಘದಿಂದ ಮೊದಲ ಬಾರಿಗೆ ಚಿನ್ನ-ಬೆಳ್ಳಿ ಕುಶಲಕರ್ಮಿಗಳ ಸಹಾಯಕ್ಕಾಗಿ https://karnatakaswarnakarasangha.com ವೆಬ್‌ಸೈಟ್ ಅನ್ನು ಅನಾವರಣಗೊಳಿಸಲಾಗುತ್ತಿದೆ.
ಕರ್ನಾಟಕ ಸ್ವರ್ಣಕಾರ ಸಂಘದ ಹಾಗೂ ಅಖಿಲ ಭಾರತ ಸ್ವರ್ಣಕಾರ ಸಂಘದ ವಿವಿಧ ಚಟುವಟಿಕೆಗಳ ಮಾಹಿತಿ ಇದರಲ್ಲಿ ಲಭ್ಯವಾಗಲಿದೆ. ಮುಂದಿನ ಹೊಸ-ಹೊಸ ಯೋಜನೆಗಳ ಪರಿಚಯವೂ ಇದರಲ್ಲಿ ಲಭ್ಯವಾಗಲಿದೆ. ಸರ್ಕಾರದಿಂದ ಸಿಗುವ ಸವಲತ್ತುಗಳ ಹಾಗೂ ವಿವಿಧ ಯೋಜನೆಗಳ ಮಾಹಿತಿ ಇದರಲ್ಲಿ ಲಭ್ಯವಾಗಿರುತ್ತದೆ. ಕುಶಲಕರ್ಮಿಗಳ ಯಾವುದೇ ಸಮಸ್ಯೆಗೆ ಸ್ಪಂದಿಸಲು ಇದು ಪರಿಣಾಮಕಾರಿ ಮಾಧ್ಯಮ ಆಗಲಿದೆ ಎಂದು ಸಂಘದ ಅಧ್ಯಕ್ಷ ಆರ್. ರಾಮಮೂರ್ತಿ , ಜಂಟಿ ಕಾರ್ಯದರ್ಶಿ ಕೆ.ಎಸ್. ವೇಣುಗೋಪಾಲ, ಸಂಘದ ಬೆಂಗಳೂರು ನಗರಾಧ್ಯಕ್ಷ ಮಧುಸೂದನ್ ಎಂ.ಎಸ್. ಪಾಲಂಕರ್ ಹಾಗೂ ದಾವಣಗೆರೆ ಜಂಟಿ ಕಾರ್ಯದರ್ಶಿ ರಮೇಶ್ ರಾಯ್ಕರ್ ತಿಳಿಸಿದ್ದಾರೆ.