ಹರಪನಹಳ್ಳಿ, ಜು.16- ಅರಸೀಕೆರೆಯಿಂದ ಕಂಚಿಕೆರೆಗೆ ರಸ್ತೆ ನಿರ್ಮಾಣ ಮಾಡುವಂತೆ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್)ದ ಕಾರ್ಯಕರ್ತರು ಕೋಲಾಶಾಂತೇಶ್ವರ ಮಠದಲ್ಲಿ ನಡೆದ ಕುಂದು-ಕೊರತೆಗಳ ಸಭೆಯಲ್ಲಿ ತಹಶೀಲ್ದಾರ್ ಅವರ ಮುಖಾಂತರ ಜಗಳೂರು ಶಾಸಕ ಎಸ್.ವಿ.ರಾಮಚಂದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್)ದ ತಾಲ್ಲೂಕು ಅಧ್ಯಕ್ಷ ಗುಡಿಹಳ್ಳಿ ಹಾಲೇಶ್ ಮಾತನಾಡಿ, ಅರಸೀಕೆರೆ ಯಿಂದ ಕಂಚಿಕೆರೆಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಗಿದ್ದು, ಸುಮಾರು 30 ವರ್ಷಗಳ ಹಿಂದೆ ಡಾಂಬರೀಕರಣವಾಗಿದ್ದು, ಇದುವರೆಗೂ ಯಾವುದೇ ದುರಸ್ತಿ ಕಾರ್ಯ ನಡೆದಿಲ್ಲ. ಈ ರಸ್ತೆಯಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಚಲಿಸು ತ್ತವೆ. ಜೊತೆಗೆ ಬಳ್ಳಾರಿಯ ಭಾಗದ ಅರ್ಧದಷ್ಟು ಜನರು ದಾವಣಗೆರೆಗೆ ಆಸ್ಪತ್ರೆಗಳಿಗೆ ತುರ್ತು ಚಿಕಿತ್ಸೆಗಾಗಿ ಅಂಬ್ಯುಲೆನ್ಸ್‌ಗಳ ಮುಖಾಂತರ ಇದೇ ರಸ್ತೆಯಲ್ಲಿ ತೆರಳುತ್ತಾರೆ. ಕೂಡಲೇ ಈ ರಸ್ತೆಯನ್ನು ಸರಿಪಡಿಸ ಬೇಕೆಂದು ಒತ್ತಾಯಿಸಿದರು.
ರಸ್ತೆಯಲ್ಲಿ ಮೊಣಕಾಲುದ್ದ ಬಿದ್ದ ಗುಂಡಿಗಳಿಂದಾಗಿ ಚಲಿಸುವ ವಾಹ ನದ ಸವಾರರು ಅಪಘಾತ ದಿಂದ ಕೈ-ಕಾಲುಗಳ ಮುರಿತಕ್ಕೊ ಳಗಾಗಿ, ನೂರಾರು ಸಾವುಗಳು ನೋವುಗಳು ಸಂಭವಿಸಿವೆ. ಹಾಗಾಗಿ ಈ ರಸ್ತೆಯ ದುರಂತ ಕುರಿತು ಹಲವಾರು ಬಾರಿ ಸಂಘಟನೆಗಳ ಮುಖಾಂತರ ರಸ್ತೆ ತಡೆಯಂತಹ ದೊಡ್ಡ ದೊಡ್ಡ ಹೋರಾಟಗಳನ್ನು ಮಾಡಿ ಮನವಿ ಸಲ್ಲಿಸಿದರೂ ಸಂಬಂಧಪಟ್ಟ ಕಿವುಡ ಜನ ಪ್ರತಿನಿ ಧಿಗಳು ಹಾಗೂ ಅಧಿಕಾರಿಗಳು ರಸ್ತೆ ಸರಿಪಡಿಸುವಲ್ಲಿ ವಿಫಲಗೊಂಡಿರುವುದನ್ನು ಎಐಕೆಎಸ್ ಕಾರ್ಯಕರ್ತರು ಖಂಡಿಸಿದ್ದಾರೆ.