ಮಲೇಬೆನ್ನೂರು, ಜು.13- ಕಡಾರನಾಯ್ಕನಹಳ್ಳಿ ಗ್ರಾಮದಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಜಿ.ಮಂಜುನಾಥ್ ಅವರು ಕೊರೊನಾ ವಾರಿಯರ್ಸ್‌ಗಳಿಗೆ ಗೌರವ ಸನ್ಮಾನ ಹಾಗೂ ಗ್ರಾಮದ ಮನೆ ಮನೆಗೆ ಮಾಸ್ಕ್ ವಿತರಣೆ ಕಾರ್ಯಕ್ರಮವನ್ನು ಇಂದು ನಡೆಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೊರೊನಾ ವಾರಿಯರ್ಸ್‌ಗಳಾದ ಗ್ರಾ.ಪಂ. ಟಾಸ್ಕ್‌ಫೋರ್ಸ್ ಸಮಿತಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ಸನ್ಮಾನಿಸಿ ಮಾತನಾಡಿದ ಮಾಜಿ ಶಾಸಕ ಬಿ.ಪಿ.ಹರೀಶ್, ಕೊರೊನಾ ನಿಯಂತ್ರಣ ನಮ್ಮ – ನಿಮ್ಮೆಲ್ಲರ ಕೈಯಲ್ಲಿದೆ. ನಾವು ಅನಾವಶ್ಯಕವಾಗಿ ಸುತ್ತಾಡುವುದು, ಕಡ್ಡಾಯವಾಗಿ ಮಾಸ್ಕ್ ಧರಿಸದಿರುವುದು,
ಸಾಮಾಜಿಕ ಅಂತರ ಕಾಯ್ದು ಕೊಳ್ಳದಿರುವುದರಿಂದ
ಕೊರೊನಾ ವೈರಸ್ ದಿನೇ ದಿನೇ ಹೆಚ್ಚಾಗುತ್ತಿದೆ ಎಂದರು. ಸರ್ಕಾರವೇ ಎಲ್ಲಾ ಮಾಡಲು ಸಾಧ್ಯವಿಲ್ಲ. ನಾವು ಜಾಗೃತರಾಗಬೇಕು ಎಂದು ಹರೀಶ್ ಕರೆ ನೀಡಿದರು.
ಕೆ.ಎನ್.ಹಳ್ಳಿ ಗ್ರಾಮದ ಟಾಸ್ಕ್‌ಫೋರ್ಸ್ ಸಮಿತಿಯ ಅಧ್ಯ ಕ್ಷರಾಗಿ ಸೇವೆ ಸಲ್ಲಿಸಿದ್ದ ಕೆ.ಹೆಚ್.ನಾಗನಗೌಡ ಮಾತನಾಡಿದರು.
ತಾಲ್ಲೂಕು ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟಿ ಲಿಂಗರಾಜ್, ಮಲೇಬೆನ್ನೂರು ಪಿಎಸ್‌ಐ ವೀರಬಸಪ್ಪ, ಪಿಎಸಿಎಸ್ ಅಧ್ಯಕ್ಷರಾದ ನೀಲಮ್ಮ, ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭುಗೌಡ, ಬಣಕಾರ ಪರಮೇಶ್ವರಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.