ತುಂಗಭದ್ರಾ ಡ್ಯಾಂ ಹಿನ್ನೀರಿನ ಕುಡಿಯುವ ನೀರಿನ ಯೋಜನೆಗೆ ಜಗಳೂರು ಸೇರಿಸಲು ವಿಫಲ: ಜಗಳೂರು ಶಾಸಕ ಎಸ್.ವಿ. ರಾಮಚಂದ್ರ ಆರೋಪ
ಜಗಳೂರು, ಜು.13- ತುಂಗಭದ್ರಾ ಜಲಾಶಯ ಹಿನ್ನೀರಿನ ಸುಮಾರು 2250 ಕೋಟಿ ರೂ.ಗಳ ಕುಡಿಯುವ ನೀರಿನ ಯೋಜನೆ ವ್ಯಾಪ್ತಿಗೆ ಜಗಳೂರು ಕ್ಷೇತ್ರವನ್ನು ಸೇರಿಸುವಲ್ಲಿ ವಿಫಲವಾಗಿರುವ ಮಾಜಿ ಶಾಸಕ ಹೆಚ್.ಪಿ. ರಾಜೇಶ್, ಕ್ಷೇತ್ರದ ಜನಕ್ಕೆ ದ್ರೋಹ ಮಾಡಿದ್ದಾರೆ ಎಂದು ಶಾಸಕ ಎಸ್.ವಿ. ರಾಮಚಂದ್ರ ಆರೋಪಿಸಿದ್ದಾರೆ.
ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಇಂದು ಏರ್ಪಾ ಡಾಗಿದ್ದ ಕೋವಿಡ್-19 ನಿಯಂತ್ರಣ ಪರಿಶೀಲನಾ ಸಭೆ ನಡೆಸಿದ ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ಕೆಲಸಗಳನ್ನು ಮಾಡು ವುದು ನನಗೆ ಗೊತ್ತಿದೆ. ಯಾರಿಂ ದಲೂ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ತಿರುಗೇಟು ನೀಡಿದರು.
ಹಿಂದಿನ ಕಾಂಗ್ರೆಸ್ ಸರ್ಕಾರ ಯೋಜನೆ ರೂಪಿಸುವಾಗ ಶಾಸಕರಾ ಗಿದ್ದವರು ಇದರ ಬಗ್ಗೆ ಯಾವುದೇ ಮಾಹಿತಿಯನ್ನು ಪಡೆಯದೆ ನಿರ್ಲಕ್ಷ್ಯ ವಹಿಸಿದ್ದಾರೆ. ಕ್ಷೇತ್ರದ ಬಗ್ಗೆ ಅವರಿಗೆ ಕಾಳಜಿ ಇದ್ದರೆ ಯೋಜನೆ ವ್ಯಾಪ್ತಿಗೆ ಜಗಳೂರು ಸೇರಬೇಕಾಗಿತ್ತು. ಈ ಬಗ್ಗೆ ನಾನೇ 2017ರಲ್ಲಿ ಪತ್ರಿಕಾ ಹೇಳಿಕೆ ನೀಡಿ ಯೋಜನೆಯ ವಿವರಗಳನ್ನು ಬಹಿರಂಗ ಪಡಿಸಿದ್ದೆ. ಆದಾಗ್ಯೂ ಅಂದಿನ ಶಾಸಕರು ನಿರ್ಲಕ್ಷ ವಹಿಸಿದ್ದರು ಎಂದು ಆರೋಪಿಸಿದರು.
ಮೊಳಕಾಲ್ಮೂರು, ಚಳ್ಳಕೆರೆ, ಕೂಡ್ಲಿಗಿ, ಪಾವಗಡ ಹಾಗೂ ಚಿತ್ರ ದುರ್ಗ ತಾಲ್ಲೂಕಿನ ತುರುವನೂರು ಹೋಬಳಿಗೆ ಕುಡಿಯುವ ನೀರು ಪೂರೈಸುವ 2250 ಕೋಟಿ ರೂಗಳ ವೆಚ್ಚದ ಯೋಜನೆ ಕ್ಷೇತ್ರದಲ್ಲಿಯೇ ಹಾದುಹೋಗಿದೆ. ಆದರೆ, ಜಗಳೂರು ಸೇರಿಲ್ಲ. ಯೋಜನೆಗೆ ಎಸಿಪಿ ಮತ್ತು ಟಿ ಎಸ್ ಪಿ ಅನುದಾನ ಕಲ್ಪಿಸಿಕೊಡಲಾಗಿದೆ. ವಿಧಾನಸಭಾ ಕ್ಷೇತ್ರ ಎಸ್ಪಿ ಮೀಸಲು ಕ್ಷೇತ್ರವಾಗಿದ್ದು, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನ ಹೆಚ್ಚಾಗಿದ್ದಾರೆ. ಆದರೂ ಸಹ ಈ ಯೋಜನೆ ವ್ಯಾಪ್ತಿಗೆ ಜಗಳೂರು ಸೇರಿಸುವಲ್ಲಿ ಮಾಜಿ ಶಾಸಕರು ವಿಫಲರಾಗಿದ್ದಾರೆ. ಇದು ಅವರ ಕಾರ್ಯವೈಖರಿಯ ಪ್ರತೀಕವಾಗಿದೆ ಎಂದು ರಾಮಚಂದ್ರ ಕುಟುಕಿದರು.
ಈ ಯೋಜನಾ ವ್ಯಾಪ್ತಿಗೆ ಕಸಬಾ ಹೋಬಳಿ ಅಣಬೂರು ಗ್ರಾ. ಪಂ. ವ್ಯಾಪ್ತಿಯ ಹಳ್ಳಿಗಳನ್ನು ಸೇರ್ಪಡೆ ಮಾಡಿ ಕುಡಿಯುವ ನೀರು ನೀಡ ಬೇಕು ಎಂದು ಒತ್ತಾಯಿಸಿ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನಾನೂ ಸಹ ನನ್ನ ಪ್ರಯತ್ನವನ್ನು ಮುಂದುವರೆಸುತ್ತೇನೆ ಎಂದರು.
57 ಕೆರೆ ತುಂಬಿಸುವ ಯೋಜ ನೆಯಲ್ಲಿ ನನ್ನ ಹಾಗೂ ಸಂಸದರ ಪಾತ್ರ ಶೂನ್ಯ ಇರಬಹುದು. ಆದರೆ ನಮ್ಮ ಸರಕಾರ ಬಂದ ಮೇಲೆ ಕಾಮಗಾರಿ ಆರಂಭವಾಗಿದೆ.
ಸಿರಿಗೆರೆ ಶ್ರೀಗಳ ಮಾರ್ಗ ದರ್ಶನದಂತೆ ನಾವು ಕೆಲಸ ಮಾಡಿ ದ್ದೇವೆ. ಸಂಪೂರ್ಣ ಶ್ರೇಯಸ್ಸು ಸಿರಿಗೆರೆ ಶ್ರೀಗಳಿಗೆ ಸಲ್ಲುತ್ತದೆ. ಈ ಯೋಜನೆ ಜಾರಿಗೆ ನಾವು ತಂದಿದ್ದೇವೆ ಎಂದು ನಾವು ಎಲ್ಲೂ ಹೇಳಿಲ್ಲ. ಕ್ಷೇತ್ರದ ಜವಾಬ್ದಾರಿಯುತ ಶಾಸಕನಾಗಿ ಸಂಸದರಾಗಿ ಕಾಮಗಾರಿ ಪರಿಶೀಲನೆ ನಡೆಸಿದ್ದೇವೆ ಎಂದು ಮಾಜಿ ಶಾಸಕರ ಟೀಕೆಗೆ ತಿರುಗೇಟು ನೀಡಿದರು.