ಹರಿಹರ : ಕೊರೊನಾ ತಡೆಗೆ ಟಾಸ್ಕ್‌ಫೋರ್ಸ್‌ ಸಮಿತಿ ರಚನೆ

ಹರಿಹರ, ಜು.10- ನಗರದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಹಕಾರದಿಂದ ವಾರ್ಡ್‌ ಮುಖ್ಯಸ್ಥರ ಸಮ್ಮುಖದಲ್ಲಿ ಟಾಸ್ಕ್‌ಫೋರ್ಸ್‌ ಸಮಿತಿ ರಚಿಸಿ, ಅದರ ಮುಖಾಂತರ ಕೋವಿಡ್ 19 ರೋಗ ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಪೌರಾಯುಕ್ತರಾದ ಶ್ರೀಮತಿ ಎಸ್. ಲಕ್ಷ್ಮಿ ತಿಳಿಸಿದರು.

ನಗರಸಭೆ ಸಭಾಂಗಣದಲ್ಲಿ ನಡೆದ ಕೋವಿಡ್‌-19 ವಿಚಾರವಾಗಿ ನಗರದ ವಿವಿಧ ವಾರ್ಡ್‌ ಸದಸ್ಯರು, ಮುಖ್ಯಸ್ಥರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸೇರಿದಂತೆ, ಇತರೆ ಹಲವಾರು ಇಲಾಖೆಯ ಸಹಯೋಗದೊಂದಿಗೆ ಕೊರೊನಾ ಸೋಂಕು ಕಡಿಮೆ ಮಾಡುವುದಕ್ಕೆ ವಾರ್ಡ್‌ ಮಟ್ಟದ ಟಾಸ್ಕ್‌ಫೋರ್ಸ್‌ ಸಮಿತಿ ಸದಸ್ಯರಿಗೆ ತರಬೇತಿ ಕಾರ್ಯಾಗಾರದ ಸಭೆಯಲ್ಲಿ ಅವರು ಮಾತನಾಡಿದರು.

ಆರೋಗ್ಯ ಅಧಿಕಾರಿ ಡಾ. ಚಂದ್ರಮೋಹನ್ ಮಾತನಾಡಿ, ಇದುವರೆಗೆ 44 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿವೆ. 

ಸಾರ್ವಜನಿಕರು ಜಿಲ್ಲಾಸ್ಪತ್ರೆಗೆ ತೆರಳಿ, ಚಿಕಿತ್ಸೆ ಪಡೆಯಲು ತೊಂದರೆಯಾಗುತ್ತಿರುವುದನ್ನು ಗಮ ನಿಸಿ, ಸರ್ಕಾರ ತಾಲ್ಲೂಕು ಮಟ್ಟದಲ್ಲಿ ಆಸ್ಪತ್ರೆಯನ್ನು ಇನ್ನು ಎರಡು ದಿನಗಳಲ್ಲಿ ತೆರೆಯಲಿದೆ. ಇದರಿಂ ದಾಗಿ ಜನತೆಗೆ ಅನುಕೂಲ ಆಗಲಿದೆ ಎಂದು ಹೇಳಿದರು.

ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ಮಾತನಾಡಿ, ಕೋವಿಡ್-19 ನಿರ್ವಹಣೆ ತರಬೇತಿ ಕಾರ್ಯಾಗಾರ ಮತ್ತು ವಾರ್ಡ್‌ ಮಟ್ಟದ ಟಾಸ್ಕ್‌ಫೋರ್ಸ್‌ ಸಭೆ ಗ್ರೂಪ್‌ನಲ್ಲಿ ಮಾಹಿತಿ  ಹಂಚಿಕೆಯನ್ನು ಮಾಡಿಕೊಳ್ಳಲು ವ್ಯವಸ್ಥೆ ಮಾಡಲಾಗುತ್ತದೆ  ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಕೆ.ಜಿ.ಸಿದ್ದೇಶ್, ನಿಂಬಕ್ಕ ಚಂದಾಪೂರ್, ಇಬ್ರಾಹಿಂ, ಮುಖಂಡರಾದ ಹನುಮಂತಪ್ಪ, ಮರಿದೇವಪ್ಪ, ಮೋತ್ಯನಾಯ್ಕ್, ರಾಗಿಣಿ, ನಗರಸಭೆ ಅಧಿಕಾರಿಗಳಾದ ಮಂಜುನಾಥ್, ಮಹೇಶ್, ರವಿಪ್ರಕಾಶ್, ಕೋಡಿ ಭೀಮರಾಯ್ ಮತ್ತಿತರರು ಹಾಜರಿದ್ದರು.

error: Content is protected !!