ಕೊರೊನಾ ಹೋರಾಟಕ್ಕೆ ವಾರ್ಡ್, ಬೂತ್ ಮಟ್ಟದ ಟಾಸ್ಕ್‌ಫೋರ್ಸ್‌

ಮಲೇಬೆನ್ನೂರು, ಜು.10- ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರದ ನಿರ್ದೇಶನದಂತೆ ಪಟ್ಟಣದಲ್ಲಿರುವ 23 ವಾರ್ಡ್‌ಗಳಲ್ಲಿ ಮತ್ತು 22 ಬೂತ್‌ ಮಟ್ಟದ ಟಾಸ್ಕ್‌ಫೋರ್ಸ್‌ ಸಮಿತಿಗಳನ್ನು ರಚಿಸಲಾಗಿದ್ದು, ಸಮಿತಿಗಳ ಜವಾಬ್ದಾರಿ ತಿಳಿಸುವುದಕ್ಕಾಗಿ ಇಲ್ಲಿನ ಶಾದಿಮಹಲ್‌ನಲ್ಲಿ ತರಬೇತಿ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

ಪುರಸಭೆ ಮುಖ್ಯಾಧಿಕಾರಿ ಹಾಗೂ ಪಟ್ಟ ಣದ ನೋಡಲ್ ಅಧಿಕಾರಿ ಧರಣೇಂದ್ರ ಕುಮಾರ್ ಮಾತನಾಡಿ, ವಾರ್ಡ್ ಟಾಸ್ಕ್‌ ಫೋರ್ಸ್‌ ಸಮಿತಿಯವರು ವಾರ್ಡಿನಲ್ಲಿ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ನಿಮ್ಮ ವಾರ್ಡಿಗೆ ಬೇರೆ ದೇಶ, ರಾಜ್ಯ ಅಥವಾ ಅಂತರ್‌ ಜಿಲ್ಲೆಗಳಿಂದ ಬಂದಿ ರುವವರ ಬಗ್ಗೆ ಮಾಹಿತಿ ಪಡೆದುಕೊಂಡು ತಕ್ಷಣ ಕ್ವಾರಂಟೈನ್ ಮಾಡಿಸಿ, ನಂತರ ಆರೋಗ್ಯ ತಪಾಸಣೆ, ಕೊರೊನಾ ಟೆಸ್ಟ್‌್ ಮಾಡಿಸಬೇಕು ಎಂದು ಕರೆ ನೀಡಿದರು.

ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ನೋಡಲ್ ಅಧಿಕಾರಿ ಡಾ. ಲಕ್ಷ್ಮಿದೇವಿ ಮಾತನಾಡಿ, ಬೂತ್‌ಮಟ್ಟದ ಸಮಿತಿಯು ಮನೆ ಮನೆ ಸರ್ವೇ ನಡೆಸಿ, ಜನರ ಆರೋಗ್ಯದ ಬಗ್ಗೆ ಮಾಹಿತಿ ಪಡೆದು, ಅದರಲ್ಲಿ ಶೀತ, ಜ್ವರ, ಕೆಮ್ಮು, ನೆಗಡಿಯಿಂದ ಬಳಲುತ್ತಿರುವವರನ್ನು ಗುರುತಿಸಿ, ತುರ್ತಾಗಿ ಆರೋಗ್ಯ ಕೇಂದ್ರಕ್ಕೆ ಕರೆ ತರಬೇಕೆಂದರು.

ಉಪತಹಶೀಲ್ದಾರ್ ಹಾಗೂ ನೋಡೆಲ್ ಅಧಿಕಾರಿ ಆರ್.ರವಿ ಮಾತನಾಡಿ,  ವಾರ್ಡ್‌ಗಳಲ್ಲಿ ದಿನಂಪ್ರತಿ ಧ್ವನಿವರ್ಧಕದ ಮೂಲಕ ಕೊರೊನಾದ ಬಗ್ಗೆ ಅರಿವು ಮೂಡಿಸಬೇಕು, ವಾರ್ಡ್‌ಗಳಲ್ಲಿ 5 ಜನರಿಗಿಂತ ಹೆಚ್ಚು ಜನರು ಗುಂಪಾಗಿ ಸೇರದಂತೆ ನೋಡಿಕೊಳ್ಳಬೇಕು. 

ಸಾಮಾಜಿಕ ಅಂತರ ಕನಿಷ್ಟ 1 ಮೀಟರ್‌ ಇರಬೇಕು. ವ್ಯಾಪಾರ ಸ್ಥಳ, ಧಾರ್ಮಿಕ ಕೇಂದ್ರ, ಎಟಿಎಂ ಬಳಿ ಬಣ್ಣದ ಬಾಕ್ಸ್ ಕಡ್ಡಾಯವಾಗಿರುವಂತೆ ನೋಡಿಕೊಳ್ಳಬೇ ಕೆಂದು ಸಂಪನ್ಮೂಲ ವ್ಯಕ್ತಿ ಹಾಗೂ ನೋಡಲ್ ಅಧಿಕಾರಿ ಉಮೇಶ್ ಹೇಳಿದರು.

ಈ ಸಮಿತಿಗಳು ಇದೇ ದಿನಾಂಕ 13 ರಿಂದ ಕಾರ್ಯ ಚಟುವಟಿಕೆ ಆರಂಭಿಸಲಿವೆ ಎಂದರು.

ಪಟ್ಟಣದ ಖಾಸಗಿ ವೈದ್ಯರಾದ ಡಾ. ಬಿ.ಚಂದ್ರಶೇಖರ್, ಡಾ|| ಶ್ರೀನಿವಾಸ್, ಡಾ|| ಪ್ರಕಾಶ್, ಡಾ|| ಸ್ವಾಮಿ ಅವರುಗಳು ಅಗತ್ಯ ಸಲಹೆ ನೀಡಿದರು. 

ಎಎಸ್‌ಐ ಹನುಮಂತಪ್ಪ, ಪುರಸಭೆ ಸದಸ್ಯರಾದ ಎ.ಆರೀಫ್ ಅಲಿ, ಮಾಸಣಗಿ ಶೇಖರಪ್ಪ, ದಾದಾವಲಿ, ಭೋವಿಕುಮಾರ್, ಆದಾಪುರ ವಿಜಯಕುಮಾರ್, ಪ್ರಕಾಶ್‌ಚಾರ್, ಪಾಳೇಗಾರ್ ನಾಗರಾಜ್, ಪುರಸಭೆ ಅಧಿಕಾರಿಗಳಾದ ಗುರುಪ್ರಸಾದ್, ನವೀನ್, ದಿನಕರ್, ಗಣೇಶ್, ಪ್ರಭು  ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

error: Content is protected !!