ಪಿ.ಎಸ್.ಬಸವರಾಜ್, ಎಸ್.ಬಿ.ರುದ್ರೇಗೌಡ ಅವರುಗಳಿಂದ ಅಧಿಕಾರ ಸ್ವೀಕಾರ
ದಾವಣಗೆರೆ, ಜು.9- ಮಹಾನಗರ ಪಾಲಿಕೆಗೆ ನೂತನ ನಾಮನಿರ್ದೇಶನ ಸದಸ್ಯರು ಗಳಾಗಿ ಸರ್ಕಾರ ನೇಮಕ ಮಾಡಿ ಆದೇಶ ಮಾಡಿದ್ದ ಪಿ.ಎಸ್.ಬಸವರಾಜ್, ಎಸ್.ಬಿ.ರುದ್ರೇಗೌಡ ಅವರುಗಳನ್ನು ಮಹಾನಗರ ಪಾಲಿಕೆಯ ಆಯುಕ್ತ ವಿಶ್ವನಾಥ್ ಮುದಜ್ಜಿ ಪುಷ್ಪಮಾಲೆ ಹಾಕಿ ಪಾಲಿಕೆಗೆ ಆಹ್ವಾನಿಸಿದರು. ಪಾಲಿಕೆಯ ಆಡಳಿತಕ್ಕೆ ತಮ್ಮ ಸಹಕಾರ ಸಲಹೆಗಳು ಅತ್ಯಮೂಲ್ಯವಾಗಿದ್ದು, ಸದಾ ನಮ್ಮೊಂದಿಗೆ ಸಹಕರಿಸಿ ನಗರದ ಅಭಿವೃದ್ಧಿ ಮಾಡುವಲ್ಲಿ ಬೆಂಬಲ ನೀಡಿ ಎಂದರು.
ಇದೇ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಎ.ನಾಗರಾಜ್, ಪಾಲಿಕೆ ಸದಸ್ಯ ದೇವರಮನೆ ಶಿವಕುಮಾರ್ ಶುಭ ಕೋರಿ ನೆನಪಿನ ಕಾಣಿಕೆ ನೀಡಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಮಾಜಿ ಉಪಮಹಾಪೌರರಾದ ಪಿ.ಎಸ್. ಜಯಣ್ಣ, ಧನಂಜಯ್ ಕಡ್ಲೇಬಾಳು, ಕೆ.ಎನ್.ಹೇಮಂತ್ ಕುಮಾರ್, ಪಾಲಿಕೆ ಸದಸ್ಯರಾದ ಮಂಜ್ಯಾನಾಯ್ಕ, ವೀರೇಶ್, ಶಿವನಗೌಡ ಪಾಟೀಲ್, ರೇಣುಕಾ ಶ್ರೀನಿವಾಸ್ ಸೇರಿದಂತೆ ಸ್ಥಳೀಯ ಕಾರ್ಯಕರ್ತರಾದ ಮುಕುಂದಪ್ಪ, ಹೆಚ್.ಬಿ.ದುರುಗೇಶ್, ಎಮ್.ಎನ್ ಮಂಜುನಾಥ್, ಕೆ.ಜಿ. ಕಲ್ಲಪ್ಪ, ಎಮ್.ಎನ್. ಚಂದ್ರಶೇಖರ್, ಶಿದ್ದಲಿಂಗಪ್ಪ, ಬಸವರಾಜಯ್ಯ, ಗುರು, ರಾಮಾಂಜನೇಯ, ವಾಸುದೇವ್ ಸಾಕ್ರೆ ಸೇರಿದಂತೆ ಹಲವಾರು ಕಾರ್ಯಕರ್ತರು ಮುಖಂಡರು ಉಪಸ್ಥಿತರಿದ್ದರು.