ಹರಪನಹಳ್ಳಿ, ಜು, 9- ಕೋವಿಡ್ -19 ವಿರುದ್ದದ ಹೋರಾಟಕ್ಕೆ ಅಗತ್ಯವಿರುವಷ್ಟು ಸಂರಕ್ಷಣಾ ಸಾಮಗ್ರಿಗಳು ಸಿಗದ ಕಾರಣ ತಾಲ್ಲೂಕಿನ ಅರಸೀಕೆರೆ ಹಾಗೂ ಉಚ್ಚಂಗಿ ದುರ್ಗದ ಆಶಾ ಕಾರ್ಯಕರ್ತೆಯರು ಇಂದಿನಿಂದ ಅನಿರ್ದಿಷ್ಟ ಹೋರಾಟ ಮಾಡುವುದಾಗಿ ಕರ್ನಾಟಕ ರಾಜ್ಯ ಸಂಯುಕ್ತ ಎಐಯುಟಿಯುಸಿ ಸಂಘದ ಬೆಂಬಲದೊಂದಿಗೆ ಹೋರಾಟ ಮಾಡುವುದಾಗಿ ತಿಳಿಸಿದೆ.
ತಮ್ಮ ವಿವಿಧ ಬೇಡಿಕೆಗಳಾದ ಮಾಸಿಕ 12000 ರೂ. ಗೌರವ ಧನ ಖಾತ್ರಿ ಪಡಿಸ ಬೇಕು ಹಾಗೂ ಕೋವಿಡ್-19 ಕ್ಕೆ ತುತ್ತಾದ ಆಶಾ ಕಾರ್ಯಕರ್ತೆಯರಿಗೆ ಪರಿಹಾರ ಹಾಗೂ ಸಂಪೂರ್ಣ ಚಿಕಿತ್ಸೆ ನೀಡಬೇಕೆಂದು ಸರಕಾರಕ್ಕೆ ಒತ್ತಾಯಿಸುವ ಮೂಲಕ ಅನಿರ್ದಿಷ್ಟ ಹೋರಾಟ ಮಾಡುವುದಾಗಿ ನುಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮನೆ ಮನೆಗೂ ಹೋಗಿ ಸರ್ವೆ ಮಾಡಲು ನಮ್ಮಲ್ಲಿ ಯಾವುದೇ ಪಿಪಿಇ ಕಿಟ್, ಸ್ಯಾನಿಟೈಸರ್, ಮಾಸ್ಕ್, ಹ್ಯಾಂಡ್ಗ್ಲೋಸ್ ಸಿಗದ ಕಾರಣ ಕೆಲಸ ಮಾಡಲು ಯಾವುದೇ ಸಲಕರಣೆ ಇಲ್ಲವೆಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನ ವಾಗಿಲ್ಲ. ಆದ್ದರಿಂದ ಅರಸೀಕೆರೆ, ಉಚ್ಚಂಗಿ ದುರ್ಗದ ಆಶಾ ಕಾರ್ಯಕರ್ತರು ಅನಿರ್ದಿಷ್ಟ ಹೋರಾಟ ಮಾಡಲು ಮುಂದಾಗಿದ್ದು, ಮಾಸಿಕ ಗೌರವ ಧನ 12000 ರೂ ಖಾತ್ರಿಪಡಿಸುವುದರ ಜೊತೆಗೆ ಕೋವಿಡ್-19 ಹೋರಾಟದ ವಿರುದ್ದ ಅಗತ್ಯವಿರುವಷ್ಟು ಸುರಕ್ಷಣಾ ಸಾಮಗ್ರಿಗಳನ್ನು ನೀಡಬೇಕು, ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಡಾ ಜಗದೀಶ್ ಆಶಾ ಕಾರ್ಯಕರ್ತೆಯರಾದ ಪಿ.ಅಂಜಿನಮ್ಮ, ಎಂ ನಿರ್ಮಲ, ಭಾರತಿ, ಪಿ.ಸುಶೀಲಮ್ಮ, ಕೆಂಚಮ್ಮ, ಸುಜಾತ, ಸಿಂಧು ಸೇರಿದಂತೆ ಇತರರು ಉಪಸ್ಥಿತರಿದ್ದರು.