ರಾಣೇಬೆನ್ನೂರಿನಲ್ಲಿ ಐವರಿಗೆ ಸೋಂಕು

ಮಿನಿ ವಿಧಾನಸೌಧ ಸೀಲ್‍ಡೌನ್ , ಕಟ್ಟಡಕ್ಕೆ ಸ್ಯಾನಿಟೈಸ್

ರಾಣೇಬೆನ್ನೂರು, ಜು. 9-  ನಗರ ಹಾಗೂ ಗ್ರಾಮೀಣ ಭಾಗದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು ಗುರುವಾರ ಐದು ಹೊಸ ಪ್ರಕರಣಗಳು ವರದಿಯಾಗಿವೆ.  ಇಲ್ಲಿನ ಮಿನಿ ವಿಧಾನಸೌಧವನ್ನೇ ಸೀಲ್‍ಡೌನ್ ಮಾಡಲಾಗಿದೆ. 

ನಗರದ ಹುಣಸಿಕಟ್ಟಿ ರಸ್ತೆಯ ಸರ್ಕಾರಿ ಹಾಸ್ಟೆಲ್‍ನಲ್ಲಿರುವವರನ್ನು ಬುಧವಾರ ತಹಶೀಲ್ದಾರ್ ಬಸನಗೌಡ ಕೋಟೂರ ಭೇಟಿ ಮಾಡಿದರು. 

ಈ ಸಮಯದಲ್ಲಿ ಅವರ ಜತೆಯಲ್ಲಿದ್ದ ಸರ್ಕಾರಿ ವೈದ್ಯರಿಗೆ ಕೊರೊನಾ ತಗುಲಿರುವ ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ತಹಶೀಲ್ದಾರ್ ಹಾಗೂ ಅವರ ವಾಹನ ಚಾಲಕ ಇಬ್ಬರೂ ತಮ್ಮ ಸ್ವ್ಯಾಬ್ ನೀಡಿದ್ದು ಹೋಂ ಕ್ವಾರಂಟೈನ್‍ನಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಇಡೀ ವಿಧಾನಸೌಧವನ್ನೇ ಸೀಲ್‍ಡೌನ್ ಮಾಡಿ ಸಂಪೂರ್ಣ ಕಟ್ಟಡವನ್ನು ಸ್ಯಾನಿಟೈಸ್ ಮಾಡಲಾಗಿದೆ.

ಮುಂದಿನ 72 ಗಂಟೆಗಳವರೆಗೂ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ ಎಂದು ತಿಳಿದು ಬಂದಿದೆ. ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಹೋಂ ಕ್ವಾರಂಟೈನ್‍ನಲ್ಲಿ ಇರುವಂತೆ ಸೂಚಿಸಲಾಗಿದೆ.

error: Content is protected !!