ಫಲಾನುಭವಿ ರೈತರ ಹಣ ದುರುಪಯೋಗ : ತನಿಖೆಗೆ ಆಗ್ರಹ

ಜಗಳೂರು, ಜು.7- ಕೃಷಿ ಹೊಂಡದ ಫಲಾನು ಭವಿಗಳಿಗೆ ಬಿಲ್ ಪಾವತಿಸಲು ವಿಳಂ ಬವಾಗಿದೆ ಮತ್ತು ಬೆಳೆ ವಿಮೆ ಸಮರ್ಪ ಕವಾಗಿ ರೈತರಿಗೆ ಹಣ ಪಾವತಿಸಿಲ್ಲ ಎಂದು ಕೃಷಿ ಇಲಾಖೆಯ ವಿರುದ್ಧ ಕರ್ನಾಟಕ ರೈತ ಸಂಘ (ರೇವಣಸಿದ್ದಪ್ಪ ಹುಚ್ಚಂಗಿಪುರ) ಬಣದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗ ಜಮಾ ಯಿಸಿ, ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಹಾಕಿ, ನಂತರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಕಳೆದ ವರ್ಷ ರೈತರು ತಮ್ಮ ಜಮೀನಿನಲ್ಲಿ ಕೃಷಿ ಹೊಂಡ ಮಾಡಿಸಿದ್ದು, ಇದುವರೆಗೂ ಅವರ ಖಾತೆಗೆ ಬಿಲ್ ಪಾವತಿಯಾಗಿಲ್ಲ ಮತ್ತು ಸ್ಪ್ರಿಂಕ್ಲರ್ ಪಾಟ್‌ಗಳನ್ನು ವಿತರಿಸದೆ, ಸಬೂಬು ಹೇಳಿಕೊಂಡು ಅಧಿಕಾರಿಗಳು ರೈತರನ್ನು ಅಲೆದಾಡಿಸುತ್ತಿದ್ದಾರೆ. ಅಲ್ಲದೇ ಬೆಳೆ ವಿಮೆ ತಾಲ್ಲೂಕಿನ ಅರ್ಹ ಫಲಾನುಭವಿಗಳಿಗೆ ತಲುಪಿಲ್ಲ. ಸರ್ಕಾರ ಮಾತ್ರ ಅಧಿಕಾರಿಗಳ ಮೇಲೆ ನಂಬಿಕೆಯಿಟ್ಟು, ಆಡಳಿತ ನಡೆಸುತ್ತಿದೆ. ಅಧಿಕಾರಿಗಳು ಸುಳ್ಳನ್ನೇ ಕಲೆಯನ್ನಾಗಿಸಿಕೊಂಡು ರೈತರಿಗೆ ವಂಚಿಸುತ್ತಿದ್ದಾರೆ ಎಂದು ಮುಖಂಡರು ಆರೋಪಿಸಿದರು.

ಈ‌ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ರೇವಣಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ ಯು.ಸಿ.ರವಿ, ಉಪಾಧ್ಯಕ್ಷ ಮಂಜು, ತಾಲ್ಲೂಕು ಅಧ್ಯಕ್ಷ ಆಕನೂರು ನಿಂಗಪ್ಪ, ಪದಾಧಿಕಾರಿಗಳಾದ ಬಸವಾಪುರ ಲಂಕೇಶ್, ಚನ್ನಪ್ಪ, ಚಂದ್ರನಾಯ್ಕ, ಅರಕೆರೆ ನಾಗಣ್ಣ, ಕೃಷ್ಣಪ್ಪ, ಶ್ರೀನಿವಾಸ್, ಹನುಮಂತಪ್ಪ, ವಾಜಿದ್, ಶರಣಪ್ಪ ಮತ್ತಿತರರು ಭಾಗವಹಿಸಿದ್ದರು.

error: Content is protected !!