ಜಿಗಳಿಯಲ್ಲಿ ಕೊರೊನಾ ವಾರಿಯರ್ಸ್‍ ಗೆ ಸನ್ಮಾನ

ಮಲೇಬೆನ್ನೂರು, ಜು. 5 – ಹೆಮ್ಮಾರಿ ಕೊರೊನಾ ಸೋಂಕು ಕಾಲಿಡದಂತೆ ಹಗಲಿರಳು ಶ್ರಮಿಸುತ್ತಿರುವ ಆರೋಗ್ಯ ಇಲಾಖೆಯವರು, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಜಿಗಳಿ ಗ್ರಾ.ಪಂ. ವತಿಯಿಂದ ಸನ್ಮಾನಿಸಿ, ಪ್ರೋತ್ಸಾಹ ನೀಡಲಾಯಿತು.

ಹೊಳೆ ಸಿರಿಗೆೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರೇಖಾ, ಆರೋಗ್ಯ ಸಹಾಯಕಿಯರಾದ ಭಾಗ್ಯಮ್ಮ, ಆರೋಗ್ಯ ವಾಣಿ ಸೇರಿದಂತೆ ಜಿಗಳಿ, ಜಿ.ಬೇವಿ ನಹಳ್ಳಿ, ವ ಬಸಾಪುರ ಗ್ರಾಮಗಳ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ನೆನಪಿನ ಕಾಣಿಕೆ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಗ್ರಾ.ಪಂ ಅಧ್ಯಕ್ಷ ಬಿ.ಕೆ ಮಹೇಶ್ವರಪ್ಪ ಮಾತನಾಡಿ, ಕೊರೊನಾ ತಡೆಗಟ್ಟಲು ಜನರ ಸಹಕಾರ ಅತಿ ಅಗತ್ಯವಾಗಿದೆ. ಜನರು ಜಾಗೃತರಾಗದಿದ್ದರೆ ಕೊರೊನಾ ಎಲ್ಲಾ ಕಡೆ ಕಾಲಿಡಲಿದೆ ಎಂದು ಎಚ್ಚರಿಸಿದರು.

ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಎಂ. ದೇವೇಂದ್ರಪ್ಪ ಮಾತನಾಡಿದರು.

ತಾ.ಪಂ ಸದಸ್ಯೆ ರತ್ನಮ್ಮ, ಕೆ.ಆರ್ ರಂಗಪ್ಪ, ಪಿ.ಡಿ.ಓ ದಾಸರ ರವಿ ಮಾತನಾಡಿದರು. ಗ್ರಾ.ಪಂ. ಉಪಾಧ್ಯಕ್ಷೆ ಪದ್ಮಮ್ಮ ಮಂಜಪ್ಪ ಗ್ರಾ.ಪಂ  ಸದಸ್ಯರಾದ ಡಿ.ಎಂ ಹರೀಶ್, ಗೀತಾಮ್ಮ ಮಂಜಪ್ಪ, ಜಿ.ಬೇವಿನಹಳ್ಳಿಯ ಎಂ. ಹನುಮಂತಪ್ಪ, ರಾಜಪ್ಪ, ಎ.ಕೆ. ರಂಗನಾಥ್, ಮಂಜಪ್ಪ, ಜಿಗಳಿಯ ಕೆ.ಎಂ. ರಾಮಪ್ಪ, ಬಿ. ಸೋಮಶೇಖರಚಾರಿ, ಇಂಡಿ ನಿಂಗಪ್ಪ, ಕೆ.ಎಚ್. ರಾಮಪ್ಪ , ಗ್ರಾ.ಪಂ. ಎಸ್ ಡಿ ಎ ದಾನಪ್ಪ, ಬಿಲ್‍ಕಲೆಕ್ಟರ್ ಬಿ.ಮೌನೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!