ಹರಪನಹಳ್ಳಿ, ಜು.5- ತಾಲ್ಲೂಕಿನಲ್ಲಿ ಭಾನುವಾರ 3 ಜನರಿಗೆ ಕೋವಿಡ್ ಸೋಂಕು ದೃಢ ಪಟ್ಟಿದೆ. ಅರಸಿಕೇರಿ ಗ್ರಾಮದಲ್ಲಿ ಕಿರಾಣಿ ಸ್ಟೋರ್ನ ಮಾವ ಹಾಗೂ ಅಳಿಯನಿಗೆ ಸೋಂಕು ದೃಢ ಪಟ್ಟಿದ್ದು, ಇಬ್ಬರನ್ನು ಬಳ್ಳಾರಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹರಪನಹಳ್ಳಿ ಪಟ್ಟಣದ ಸುಣಗಾರಗೇರಿಯಲ್ಲಿ 48 ವರ್ಷದ ವ್ಯಕ್ತಿಯೊಬ್ಬರಿಗೆ ಕೋವಿಡ್ ಸೋಂಕು ದೃಢ ಪಟ್ಟಿದೆ.
ಹರಪನಹಳ್ಳಿ ಪಟ್ಟಣದ ಕೊಟ್ಟೂರು ರಸ್ತೆಯ ಕೆಹೆಚ್ಬಿ ಕಾಲೋನಿಯಲ್ಲಿ ವಾಸವಿರುವ ಸೀಡ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 49 ವರ್ಷದ ವ್ಯಕ್ತಿ ಅನಾರೋಗ್ಯದಿಂದ ದಾವಣಗೆರೆ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಆತನಿಗೂ ಕೋವಿಡ್ ಸೊಂಕು ದೃಢ ಪಟ್ಟಿದೆ. ಈತನ ಪ್ರಾಥಮಿಕ 4 ಹಾಗೂ ದ್ವಿತೀಯ ಸಂಪರ್ಕ ಹೊಂದಿದ 8 ಜನರನ್ನು ಕ್ವಾರಂಟೈನ್ಗೆ ಅಳವಡಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಗುರುತಿಸುವ ಹೊಣೆ ಶಿಕ್ಷಣ ಇಲಾಖೆಗೆ : ಕೊರೊನಾ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದವರನ್ನು ಗುರುತಿಸಲು ಇಂದಿನಿಂದ ಶಿಕ್ಷಣ ಇಲಾಖೆಗೆ ಜಿಲ್ಲಾಧಿಕಾರಿಯವರು ಜವಾಬ್ದಾರಿ ನೀಡಿ, ಆದೇಶ ಹೊರಡಿಸಿದ್ದಾರೆ.
ಆ ಪ್ರಕಾರ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ.ವೀರಭದ್ರಯ್ಯನವರು ತಾಲ್ಲೂಕು ಮಟ್ಟದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಡಿ.ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ ಎರಡು ತಂಡಗಳನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡಿದ್ದಾರೆ.
ಸಮಿತಿ 1 – ಬಿಆರ್ಸಿ ಡಿ.ಮಲ್ಲಿಕಾರ್ಜುನ್ (9591779496), ಶಿಕ್ಷಣ ಸಂಯೋಜಕ ಗಿರಜ್ಜಿ ಮಂಜುನಾಥ (7975534785), ಇಬ್ಬರು ಸಂವಹನಾಶೀಲ ಶಿಕ್ಷಕರನ್ನಾಗಿ ಹೆಚ್.ಸಲೀಂ (9632808070), ಹೆಚ್.ಸಿದ್ದಬಸಪ್ಪ (8152003039) ಹಾಗೂ ಡಾಟಾ ಎಂಟ್ರಿ ಆಪರೇಟರ್ ಆಗಿ ಎಸ್ .ರಾಘವೇಂದ್ರ (9880997707) ಅವರನ್ನು ನಿಯೋಜಿಸಲಾಗಿದೆ.
ಸಮಿತಿ 1ಎ ದಲ್ಲಿ ಬಿಆರ್ಸಿ ಡಿ.ಮಲ್ಲಿಕಾರ್ಜುನ್, ಶಿಕ್ಷಣ ಸಂಯೋಜಕ ಜಯಮಾಲತೇಶ (9449911105), ಸಂವಹನಾಶೀಲ ಶಿಕ್ಷಕರಾಗಿ ಬಿ.ದೇವರಾಜಚಾರಿ (9901277910), ಅಸ್ಲಂಬಾಷಾ (9035504241), ಡಾಟಾ ಎಂಟ್ರಿ ಆಪರೇಟರುಗಳು – ಕೆ.ಎಸ್.ಶಿವನಗೌಡ (9535560600), ಯು.ಶಿವಕುಮಾರ್ (8861612728) ಹೀಗೆ ಎರಡು ತಂಡಗಳನ್ನು ಗುರುತಿಸಲು ರಚಿಸಲಾಗಿದೆ.
ಇವರಲ್ಲದೆ ಪ್ರತಿಯೊಂದು ಕ್ಲಸ್ಟರ್ಗಳಿಗೆ ಒಂದೊಂದು ತಂಡಗಳನ್ನು ಆಯಾ ಭಾಗದಲ್ಲಿ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದ ವ್ಯಕ್ತಿಗಳನ್ನು ಗುರುತಿಸಲು ನೇಮಕ ಮಾಡಲಾಗಿದೆ.