ದಾವಣಗೆರೆ, ಜು.3- ದಾವಣಗೆರೆ-ಹರಿಹರ ನಗಾರಾಭಿವೃದ್ದಿ ಪ್ರಾಧಿಕಾರದ ವತಿಯಿಂದ ದಾವಣಗೆರೆ-ಬೀರೂರು-ಸಮ್ಮಸಗಿ ರಸ್ತೆಯಲ್ಲಿ ವಿವಿಧ ಕಾಮಗಾರಿಗಳಿಗೆ ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ ಹಾಗೂ ಶಾಸಕ ಎಸ್.ಎ.ರವೀಂದ್ರನಾಥ್ ಅವರುಗಳು ಇಂದು ಬೆಳಿಗ್ಗೆ ಭೂಮಿ ಪೂಜೆ ನೇರವೇರಿಸಿದರು.
ಈ ಸಂದರ್ಭದಲ್ಲಿ ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮತ್ತು ಆಯುಕ್ತ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿರುವ ಪಿ.ಬಿ ರಸ್ತೆ, ಬೀರೂರು-ಸಮ್ಮಸಗಿ ರಸ್ತೆಯ ಉಳಿದ ಪ್ರದೇಶದ ಮೀಡಿಯಾದಲ್ಲಿ ಹಾಲಿ ಬೆಡ್ ಹಾಕಿರುವ ಸ್ಥಳದಲ್ಲಿ 49 ಲಕ್ಷ ರೂ.ವೆಚ್ಚದಲ್ಲಿ ಹೊಸದಾಗಿ ಅಲಂಕಾರಿಕ ಕಂಬಗಳನ್ನು ಹಾಗೂ 40 ಎಲ್.ಇ.ಡಿ ಬೀದಿ ದೀಪಗಳನ್ನು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಿಂದ ಜಿಎಂಐಟಿ ಕಾಲೇಜು ಮುಂಭಾಗದವರೆಗೂ ಅಳವಡಿಸಲಾಗುವುದು ಎಂದು ವಿವರಿಸಿದರು.
ಶಾಸಕ ಪ್ರೊ. ಲಿಂಗಣ್ಣ, ದೂಡಾ ಸದಸ್ಯರುಗಳಾದ ದೇವೀರಮ್ಮ, ಶ್ರೀಮತಿ ಸೌಭಾಗ್ಯ ಮುಕುಂದ, ಡಿ.ಬಿ. ಜಯರುದ್ರಪ್ಪ, ಎಂ. ನಾಗರಾಜ್, ಕಾರ್ಯಪಾಲಕ ಅಭಿಯಂತರ ಶ್ರೀಕರ್, ಅಭಿಯಂತರ ಸುಜಯ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.