ದಾವಣಗೆರೆ,ಜು.3- ಮಹಾನಗರ ಪಾಲಿಕೆ ವತಿಯಿಂದ 44ನೇ ವಾರ್ಡಿನಲ್ಲಿ ಕೈಗೊಳ್ಳಲುದ್ದೇಶಿಸಿರುವ ರಸ್ತೆ ಅಭಿವೃದ್ಧಿ ಮತ್ತು ಯುಜಿಡಿ ಲೈನ್ ಕಾಮಗಾರಿಗಳಿಗೆ ಲೋಕಸಭಾ ಸದಸ್ಯ ಜಿ.ಎಂ.ಸಿದ್ದೇಶ್ವರ ಮತ್ತು ಶಾಸಕ ಎಸ್.ಎ. ರವೀಂದ್ರನಾಥ್ ಚಾಲನೆ ನೀಡಿದ್ದಾರೆ.
44ನೇ ವಾರ್ಡಿನ ಎಸ್.ಎಸ್. ಬಡಾವಣೆ ಬಿ ಬ್ಲಾಕ್ 4ನೇ ಮುಖ್ಯ ರಸ್ತೆ, 1ನೇ ತಿರುವಿನಲ್ಲಿ ಇಂದು ಬೆಳಿಗ್ಗೆ ಏರ್ಪಾಡಾಗಿದ್ದ ಸರಳ ಪೂಜಾ ಸಮಾರಂಭದಲ್ಲಿ 250 ಲಕ್ಷ ರೂ.ಗಳ ವೆಚ್ಚದಲ್ಲಿ ನಡೆಸಲುದ್ದೇಶಿಸಿರುವ ಕಾಮಗಾರಿಗಳಿಗೆ ಸಂಸದರು ಮತ್ತು ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು.
ನಗರ ಪಾಲಿಕೆ ಮಹಾಪೌರರಾದ ಬಿ.ಜಿ. ಅಜಯ್ ಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಡಾ. ಎ.ಹೆಚ್. ಶಿವಯೋಗಿಸ್ವಾಮಿ, ಪಾಲಿಕೆ ಉಪ ಮಹಾಪೌರರಾದ ಶ್ರೀಮತಿ ಸೌಮ್ಯ ನರೇಂದ್ರ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಎಸ್.ಟಿ. ವೀರೇಶ್, ಪ್ರಸನ್ನ ಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಗಣ್ಯರನ್ನು 44ನೇ ವಾರ್ಡಿನ ಪಾಲಿಕೆ ಸದಸ್ಯರಾದ ಶ್ರೀಮತಿ ಶಿಲ್ಪಾ ಜಯಪ್ರಕಾಶ್ ಮತ್ತು ಬಿಜೆಪಿ ಮುಖಂಡ ಆರ್. ಜಯಪ್ರಕಾಶ್ ದಂಪತಿ ಸ್ವಾಗತಿಸಿದರು.