ಕೊರೊನಾ ಭೀತಿಯ ನಡುವೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ವಿ

ಹರಪನಹಳ್ಳಿ, ಜು.3- ಕೊರೊನಾ ಸೋಂಕಿನ ಭೀತಿಯ ನಡುವೆಯೂ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಶಿಕ್ಷಣ ಸಚಿವ ಸುರೇಶ್‍ಕುಮಾರ್‌ ಅವರ ದಿಟ್ಟ ನಡೆಯಿಂದಾಗಿ  ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಎಸ್‍ಓಪಿಯಂತೆ ಅಚ್ಚುಕಟ್ಟಾಗಿ ನಡೆದು ಪಾಲಕರ ಮತ್ತು ವಿದ್ಯಾರ್ಥಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. 

ಹರಪನನಹಳ್ಳಿ ತಾಲ್ಲೂಕಿನಲ್ಲಿ ಒಟ್ಟು 13 ಪರೀಕ್ಷಾ ಕೇಂದ್ರಗಳಲ್ಲಿ ಎಸ್‍ಓಪಿಯಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಅಚ್ಚುಕಟ್ಟಾಗಿ ನಡೆದು ಪಾಲಕರ ಮತ್ತು ವಿದ್ಯಾರ್ಥಿಗಳ ಮನ ಗೆಲ್ಲು ವಲ್ಲಿ ಯಶಸ್ವಿಯಾಗಿದ್ದು, ಇಲಾಖೆಯ ಮಾರ್ಗದರ್ಶಿ ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಕೊರೊನಾ ಆತಂಕದ ನಡುವೆ ಪಾಲ ಕರು ಮಕ್ಕಳನ್ನು ಪರೀಕ್ಷೆಗೆ ಕೂರಿಸುವಂತೆ ಮಾಡಿದ ಶಿಕ್ಷಣ ಇಲಾಖೆ ಕಾರ್ಯಕ್ಕೆ ಸಾರ್ವ ಜನಿಕ ವಲಯದಿಂದ  ಮೆಚ್ಚುಗೆ ವ್ಯಕ್ತವಾಗಿದೆ.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ.ವೀರಭದ್ರಯ್ಯ ಅವರು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ ಧೈರ್ಯದಿಂದ ಪರೀಕ್ಷೆ ಎದುರಿಸುವಂತೆ ಮಾಡಿದ ತಾಲ್ಲೂಕಿನ ಶೈಕ್ಷಣಿಕ ಆಡಳಿತಕ್ಕೆ ಶೈಕ್ಷಣಿಕ ಕಾಳಜಿ ಮತ್ತು ಮಕ್ಕಳ ಬಗ್ಗೆ ಇರುವ ಕಳಕಳಿ ಎದ್ದು ತೋರಿಸುತ್ತಿತ್ತು.  ಮತ್ತು ಮಕ್ಕಳನ್ನು ಪರೀಕ್ಷೆಗೆ ಹಾಜರು ಪಡಿಸುವಂತೆ ಕ್ರಮ ವಹಿಸಲು ಸೂಚಿಸಿದ ಅವರ ಆದೇಶ ಕೋರ್ಟಿನಿಂದ ಕೋವಾರೆಂಟ್ ಹೊರಡಿಸಿದಂತಿತ್ತು ಎಂದು ಹೇಳಬಹುದು.

ಪ್ರಾಥಮಿಕ ಶಾಲಾ ಶಿಕ್ಷಕರು ಬೆಳಿಗ್ಗೆ 7ಕ್ಕೆ ಹರಪನಹಳ್ಳಿಗೆ ಬಂದು ಆ ಹಳ್ಳಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಮಕ್ಕಳನ್ನು ಕೇಂದ್ರಕ್ಕೆ ಸಾಗಿಸುವ ಹೊಣೆ ಹೊತ್ತಿದ್ದು ಪರೀಕ್ಷೆಗೆ ಮಕ್ಕಳ ಹಾಜರಿಯನ್ನು ಹೆಚ್ಚಿಸಲು ಕಾರಣವಾಗಿತ್ತು. ಪರೀಕ್ಷಾರ್ಥಿಗಳಿಗೆ ಹಾರ್ದಿಕ ಸ್ವಾಗತಗಳೊಂದಿಗೆ ಧ್ವನಿ ವರ್ಧಕಗಳ ಮೂಲಕ ಮಾರ್ಗದರ್ಶನ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಗೆ ತಿಳುವಳಿಕೆ, ಸ್ಯಾನಿಟೈಜರ್ ವ್ಯವಸ್ಥೆ, ಥರ್ಮಲ್ ಸ್ಕ್ಯಾನಿಂಗ್, ಕೇಂದ್ರದ ಅಚ್ಚು ಕಟ್ಟಾದ ವ್ಯವಸ್ಥೆಗೆ ಸಾಕ್ಷಿಯಾಗಿತ್ತು.   ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಜರ್ ಮಾಡಿ, ಶೌಚಾಲಯಗಳನ್ನು ಸುಸ್ಥಿತಿಯಲ್ಲಿರಿಸಿ, ಆವರಣ ಗಳಲ್ಲಿ ಮಾಹಿತಿ ನೀಡುವ ಫಲಕಗಳ ನ್ನಳವಡಿಸಿ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿ, ಕೇಂದ್ರಗಳನ್ನು ಸುಸಜ್ಜಿತಗೊಳಿಸಿದ್ದು, ಇಲಾಖೆ ಮಕ್ಕಳ ಆರೋಗ್ಯದ ಕಡೆ ಗಮನ ಹರಿಸಿದ್ದು ಅದನ್ನು ಅನುಷ್ಠಾನ ಗೊಳಿಸುವಲ್ಲಿಯ ಶ್ರಮ ವಂದನೀಯ.

ಈ ಪರೀಕ್ಷೆ ನಮಗೆ ಚುನಾವಣೆಯನ್ನು ನೆನಪಿಸುವಂತೆ ಮಾಡಿತು. ಸಕಾಲಕ್ಕೆ ಪ್ರಶ್ನೆ ಪತ್ರಿಕೆಗಳನ್ನು ತಲುಪಿಸುವ ವ್ಯವಸ್ಥೆ ಆದರ ಮೇಲೆ ಮಾರ್ಗದ ಸಂಖ್ಯೆ, ವಾಹನಗಳ ಮೇಲೆ ಮಾರ್ಗ ನಮೂದು, ದಿನವಹಿ ಬದ ಲಾದ ಮಾರ್ಗಾಧಿಕಾರಿಗಳು. ಇವೆಲ್ಲಾ ಕಾರ್ಯಕ್ಷಮತೆಗೆ ಹಿಡಿದ ಕನ್ನಡಿಯಂತಾಗಿ ದ್ದವು. ಇನ್ನು ಸಾರಿಗೆ ವ್ಯವಸ್ಥೆಯೂ ಪ್ರತಿಯೊಂದು ಕೇಂದ್ರಕ್ಕೂ ಮಾರ್ಗ ನಿಗದಿ, ಮಾರ್ಗಕ್ಕೆ ಬಸ್ಸುಗಳು, ಪ್ರತಿ ಕೇಂದ್ರಕ್ಕೊಂದು ಕಾಯ್ದಿರಿ ಸಿದ ವಾಹನ, ತಾಲ್ಲೂಕಿನ ಬಿ.ಇ.ಓ. ಕಛೇ ರಿಯ ಮುಂದೆ ಎರಡು ಕಾಯ್ದಿರಿಸಿದ ವಾಹನ ಗಳನ್ನು ನೋಡಿದರೆ ಪರೀಕ್ಷೆ ಯಶಸ್ವಿ ಗೊಳಿ ಸುವಲ್ಲಿ ಇಲಾಖೆ ಮೊದಲೇ ಹಾಕಿಕೊಂಡ ಯೋಜನೆಯ ಸಮರ್ಪಕತೆ ಮತ್ತು ಅದನ್ನು ಅನುಷ್ಠಾನ ಮಾಡಿದ್ದು ಎದ್ದು ಕಾಣುತ್ತದೆ.

error: Content is protected !!