ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು

ಮಲೇಬೆನ್ನೂರು ಸುತ್ತಮುತ್ತ ‘ಪ್ರತಿಜ್ಞಾ ದಿನ’ ವೀಕ್ಷಣೆ

ಮಲೇಬೆನ್ನೂರು, ಜು.2- ಪಟ್ಟಣದ ನಿಟ್ಟೂರು ರಸ್ತೆಯಲ್ಲಿರುವ ಹಿಂದುಸ್ತಾನ್ ರೈಸ್ ಮಿಲ್ ಆವರಣದಲ್ಲಿ ಬ್ಲಾಕ್‌ ಕಾಂಗ್ರೆಸ್ ಸಮಿತಿ ವತಿಯಿಂದ `ಪ್ರತಿಜ್ಞಾ ದಿನ’ ಕಾರ್ಯಕ್ರಮವನ್ನು ಜೂಮ್‌ ಅಪ್ಲಿಕೇಷನ್ ಮೂಲಕ ವೀಕ್ಷಣೆ ಮಾಡುವ ವ್ಯವಸ್ಥೆ ಮಾಡಿದ್ದರು.

ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್‌, ಕಾರ್ಯಾಧ್ಯಕ್ಷರಾಗಿ ಸತೀಶ್‌ ಜಾರಕಿಹೊಳಿ, ಈಶ್ವರ್‌ ಖಂಡ್ರೆ, ಸಲೀಂ ಅಹಮದ್ ಅವರು ಅಧಿಕಾರ ವಹಿಸಿಕೊಳ್ಳುವ ಕಾರ್ಯಕ್ರಮವನ್ನು ಇಲ್ಲಿಯೂ ದೀಪ ಬೆಳಗಿಸಿ ಉದ್ಘಾಟಿಸಲಾಯಿತು. 

ನಂತರ ಸಂವಿಧಾನ ಪೀಠಿಕೆ ಓದಿ, ಪ್ರತಿಜ್ಞೆಯನ್ನು ಸ್ವೀಕರಿಸಿದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಕಾಂಗ್ರೆಸ್ ಪಕ್ಷವನ್ನು ದೇಶ ಹಾಗೂ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದರು.

ಕೆಪಿಸಿಸಿ ಸಂಯೋಜಕ ಶಿವಮೊಗ್ಗದ ಶ್ರೀನಿವಾಸ್‌, ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಅಬೀದ್‌ ಅಲಿ, ಎಪಿಎಂಸಿ ಸದಸ್ಯ ಜಿ. ಮಂಜುನಾಥ್ ಪಟೇಲ್,
ತಾ.ಪಂ ಸದಸ್ಯ ನಂದಿತಾವರೆ ಬಸವಲಿಂಗಪ್ಪ, ಪುರಸಭೆ ಸದಸ್ಯರಾದ ಎ. ಆರೀಫ್‌ ಅಲಿ, ದಾದಾವಲಿ, ಮುಖಂಡರಾದ ಡಾ. ಬಿ. ಚಂದ್ರಶೇಖರ್‌, ಹಕೀಂಸಾಬ್, ಸೈಯದ್‌ ಜಾಕೀರ್, ಬಿ. ವೀರಯ್ಯ, ಎಸ್‌. ರಂಗಪ್ಪ, ಸಂಕೊಳ್ಳಿ ಶಿವನಗೌಡ, ನಂದಿತಾವರೆ ಸಿದ್ದರಾಮಯ್ಯ, ಪಿ. ರೇವಣಸಿದ್ದಪ್ಪ, ಕೆ.ಪಿ. ಗಂಗಾಧರ್, ಎಂ.ಬಿ. ಫೈಜು, ಎಳೆಹೊಳೆ ಕುಮಾರ್‌, ಭೋವಿ ಕುಮಾರ್, ಪಿ.ಹೆಚ್‌. ಶಿವು, ಪಿ. ಹಾಲೇಶ್‌, ಹಳ್ಳಿಹಾಳ್ ಚಂದ್ರಶೇಖರ್‌, ಯಲವಟ್ಟಿಯ ಹೊರಟ್ಟಿರಾಜು, ಕೊಟ್ರೇಶ್‌ ನಾಯ್ಕ, ಸಾಬೀರ್ ಅಲಿ, ನಯಾಜ್ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

ಹಾಲಿವಾಣ, ಹರಳಹಳ್ಳಿ, ಕುಂಬಳೂರು, ನಿಟ್ಟೂರು, ಕೊಕ್ಕನೂರು, ಯಲವಟ್ಟಿ, ಭಾನುವಳ್ಳಿ, ದೇವರಬೆಳಕೆರೆ, ಕುಣೆಬೆಳಕೆರೆ, ಕೆ.ಎನ್. ಹಳ್ಳಿ, ವಾಸನ, ಉಕ್ಕಡಗಾತ್ರಿ, ಎಳೆಹೊಳೆ ಸೇರಿದಂತೆ ಇನ್ನೂ ಅನೇಕ ಗ್ರಾಮಗಳಲ್ಲೂ `ಪ್ರತಿಜ್ಞಾ ದಿನ’ ಕಾರ್ಯಕ್ರಮ ವೀಕ್ಷಣೆ ಮಾಡಿದ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಜ್ಞೆ ಸ್ವೀಕರಿಸಿದರು.

error: Content is protected !!