ಹರಪನಹಳ್ಳಿಯಲ್ಲಿ ಎಂ.ಪಿ.ಲತಾ ಮಲ್ಲಿಕಾರ್ಜುನ್
ಹರಪನಹಳ್ಳಿ, ಜು.2- ಪಟ್ಟಣದ ಹಡಗಲಿ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್ ಪದಗ್ರಹಣ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೊಂದಿಗೆ ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹಾಗೂ ಕಾರ್ಯಕರ್ತರು ಜೂಮ್ ಆಪ್ ಮೂಲಕ ಟಿವಿ ಯಲ್ಲಿ ವೀಕ್ಷಣೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ಒಬ್ಬ ಸಮರ್ಥ ನಾಯಕ, ಕಾಂಗ್ರೆಸ್ ಪಕ್ಷದ ಕಟ್ಟಾಳು, ಪಕ್ಷದ ವಿವಿಧ ಹುದ್ದೆಗಳನ್ನು ಈಗಾಗಲೇ ನಿರ್ವಹಿಸಿ ಯಶಸ್ವಿಯಾಗಿದ್ದಾರೆ.
ಈಗ ಮುಂಚೂಣಿಯಾಗಿ ಪಕ್ಷವನ್ನು ರಾಜ್ಯದಲ್ಲಿ ಮುನ್ನಡೆಸುತ್ತಾರೆ. ಶಾಸಕರಾಗಿ, ಸಚಿವರಾಗಿ ಸಾಕಷ್ಟು ಉತ್ತಮ ಕೆಲಸ ಮಾಡಿದ್ದು, ಕಾಂಗ್ರೆಸ್ ಪಕ್ಷವನ್ನು ಮುಂದಿನ ಬಾರಿ ಅಧಿಕಾರಕ್ಕೆ ತಂದೇ ತರುತ್ತಾರೆ ಎಂಬ ವಿಶ್ವಾಸ ಎಲ್ಲಾ ಕಾರ್ಯಕರ್ತರಿಗೆ ಇದೆ. ಅವರು ಹಾಕಿ ಕೊಟ್ಟ ಕಾರ್ಯಕ್ರಮಗಳನ್ನು ಕೆಳಮಟ್ಟದಲ್ಲಿ ನಾವು-ನೀವು ಸೇರಿ ಯಶಸ್ವಿಗೊಳಿಸಿ, ಅವರ ಕೈ ಬಲಪಡಿಸೋಣ ಎಂದರು.
ಸಿದ್ದರಾಮಯ್ಯ ಸೇರಿದಂತೆ ಹಿಂದಿನ ಕಾಂಗ್ರೆಸ್ ಸರ್ಕಾರಗಳು ಕರ್ನಾಟಕಕ್ಕೆ ಏನೇನು ಅಭಿವೃದ್ಧಿ ಕಾರ್ಯಗಳನ್ನು ಮಾಡಿವೆ ಎಂದು ಮನೆ ಮನೆಗೆ ತಿಳಿಸೋಣ ಎಂದು ಕಾರ್ಯಕರ್ತರಿಗೆ ಹೇಳಿದರು.
ತಾ.ಪಂ ಮಾಜಿ ಉಪಾಧ್ಯಕ್ಷ ಯರಬಾಳು ಹನುಮಂತಪ್ಪ, ತಾ.ಪಂ ಮಾಜಿ ಸದಸ್ಯೆ ಜಯಲಕ್ಷ್ಮಿ, ತೊಗರಿಕಟ್ಟೆ ದುರುಗಪ್ಪ, ಜಗದೀಶ್, ನವರಂಗ, ಪುರಸಭಾ ಮಾಜಿ ಸದಸ್ಯೆ ಕವಿತಾ ಸುರೇಶ್, ರವಿ ಯುವಶಕ್ತಿ ಪಡೆ ಅಧ್ಯಕ್ಷ ಉದಯಶಂಕರ್, ಮತ್ತೂರು ಬಸವರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ಕಾನಹಳ್ಳಿ ರುದ್ರಪ್ಪ, ಕಲಾಭಾರತಿ ರಿಯಾಜ್, ಡಾ.ಮುಜಾವರ್ ಭಾಷಾ, ಪುರಸಭಾ ಮಾಜಿ ಸದಸ್ಯ ಡಿ.ರಾಜಕುಮಾರ್, ಸೊಸೈಟಿ ನಿರ್ದೇಶಕ ಇಜಾರಿ ಮಹಾವೀರ್, ಎಂ.ವಿ.ಕೃಷ್ಣ, ಕಂಚಿಕೇರಿ ಜಯಲಕ್ಷ್ಮಿ, ಉಮಾ ಶಂಕರ್, ಕವಿತಾ ಸುರೇಶ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.