ಹರಪನಹಳ್ಳಿ ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯ ಶಶಿಧರ್ ಪೂಜಾರ್
ಹರಪನಹಳ್ಳಿ, ಅ.2- ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ರೈತ ವಿರೋಧಿ, ಕಾರ್ಮಿಕ ವಿರೋಧಿ, ಜನ ವಿರೋಧಿ ಮಸೂದೆಗಳನ್ನು ವಿರೋಧಿಸಿ ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಕೇಂದ್ರಗಳಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಬಳ್ಳಾರಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯ ಶಶಿಧರ್ ಪೂಜಾರ್ ಹೇಳಿದರು.
ಇಂದಿಲ್ಲಿ ಏರ್ಪಾಡಾಗಿದ್ದ, ಕೇಂದ್ರ ಸರ್ಕಾ ರವು ಮಸೂದೆಗಳನ್ನು ಅಂಗೀಕರಿಸಿದ್ದನ್ನು ವಿರೋ ಧಿಸಿ ಸಹಿ ಸಂಗ್ರಹಿಸುವ ಅಭಿಯಾನ ಮತ್ತು ಕಿಸಾನ್ ಮಜ್ದೂರ್ ಬಚಾವೋ ದಿವಸ್ ಆಚ ರಣೆ ಮತ್ತು ಸಹಿ ಸಂಗ್ರಹಿಸುವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹರಪನಹಳ್ಳಿ ಬ್ಲಾಕ್ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷ ಹೆಚ್.ಕೆ.ಹಾಲೇಶ್ ಮಾತನಾಡಿ, ಬಿಜೆಪಿ ಸರ್ಕಾರಗಳು ಶಾಸನ ಸಭೆಯಲ್ಲಿ ಸರಿಯಾಗಿ ಚರ್ಚೆಗೆ ಅಥವಾ ಪೂರ್ವ ಸಮಾಲೋಚನೆಗೆ ಅವಕಾಶ ನೀಡದೇ ಈ ಮಸೂದೆಗಳನ್ನು ಅಂಗೀಕರಿಸಿ, ರೈತರಿಗೆ ಮಾರಕವಾದ ಶಾಸನವನ್ನು ರೂಪಿಸಿವೆ. ಹಾಗಾಗಿ ಅದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷ ಅಕ್ಟೋಬರ್ 2 ರಿಂದ ಅಕ್ಟೋಬರ್ 31ರ ವರೆಗೆ ರೈತರು, ಕೃಷಿ ಕಾರ್ಮಿಕರು, ಅಂಗಡಿಯ ಮಾಲೀಕರು, ಸಣ್ಣ ವ್ಯಾಪಾರಿಗಳು, ಅಸಂಘಟಿತ ಕೂಲಿ ಕಾರ್ಮಿಕರು, ಗುಡಿ ಕೈಗಾರಿಕೆ, ಎನ್ಜಿಒಗಳ ಸದಸ್ಯರು, ಎಪಿಎಂಸಿಗಳ ನೌಕರರನ್ನೊಳಗೊಂಡಂತೆ ವಿವಿಧ ಕ್ಷೇತ್ರದ ಜನರನ್ನೊಳಗೊಂಡು ಕನಿಷ್ಠ ಎರಡು ಕೋಟಿ ಸಹಿ ಸಂಗ್ರಹಿಸುವ ಅಭಿಯಾನವನ್ನು ದೇಶದಾದ್ಯಂತ ಹಮ್ಮಿಕೊಂಡಿದ್ದು ಅದರಂತೆ ಇಂದು ಹರಪನಹಳ್ಳಿ ತಾಲ್ಲೂಕಿನಲ್ಲಿ ಮಸೂದೆಗಳ ಅಂಗೀಕಾರ ವಿರೋಧಿಸಿ ಸಾವಿರಾರು ಜನರಿಂದ ಸಹಿಗಳನ್ನು ಸಂಗ್ರಹಿಸಲಾಯಿತು ಎಂದರು.
ಈ ವೇಳೆ ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಪಿ.ಎಲ್. ಪೋಮ್ಯಾನಾಯ್ಕ್, ಪುರಸಭೆ ಸದಸ್ಯರಾದ ಜಾಕೀರ್ ಹುಸೇನ್, ಉದ್ದಾರ ಗಣೇಶ್, ಲಾಟಿ ದಾದಾಪೀರ್, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಪಿ.ಟಿ.ಭರತ್, ಕೆ.ರಿಯಾಜ್, ಕೆಪಿಸಿಸಿ ರಾಜ್ಯ ಸಂಚಾಲಕ ನಜೀರ್ ಅಹ್ಮದ್, ರಿಯಾಜ್, ತಿಮ್ಮನಾಯ್ಕ್, ನೇಮಾನಾಯ್ಕ್, ಯಲ್ಲಾಪುರದ ರೊಕ್ಕಪ್ಪ, ಪಿ.ಪರಶುರಾಮ, ಟಿ.ಪ್ರವೀಣ್ಕುಮಾರ್ ಸೇರಿದಂತೆ ಮತ್ತಿತರ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಇದ್ದರು.
ಪಟ್ಟಣದ ಕೆಪಿಸಿಸಿ ವಕ್ತಾರ ಹಾಗೂ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ್ ಅವರ ನಿವಾಸದಲ್ಲಿ ಏರ್ಪಾಡಾಗಿದ್ದ ಈ ಕಾರ್ಯಕ್ರಮದ ಸಂದರ್ಭದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು.