ಹರಪನಹಳ್ಳಿ, ಅ.1- ದೇಶಾದ್ಯಂತ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಜಾರಿಗೆ ಬಂದಿದ್ದು, ಪ್ರತಿಯೊಬ್ಬ ವಾಹನ ಸವಾರರು ತಮ್ಮ ವಾಹನದ ಮೂಲ ದಾಖಲೆಗಳನ್ನು ಇಟ್ಟುಕೊಳ್ಳಬೇಕು ಎಂದು ಡಿವೈಎಸ್ಪಿ ಮಲ್ಲೇಶ್ ದೊಡ್ಡ ಮನಿ ಹೇಳಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕು ತಡೆ ಗಟ್ಟುವ ನಿಟ್ಟಿನಲ್ಲಿ ಮಾಸ್ಕ್ ಕಡ್ಡಾಯ ಎಂದು ರಾಜ್ಯ ಸರ್ಕಾರ ಹೊರಡಿಸಿದ ಆದೇಶದ ಹಿನ್ನೆಲೆಯಲ್ಲಿ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಸಿಪಿಐ ಕೆ.ಕುಮಾರ್, ಪಿಎಸ್ಐ ಸಿ.ಪ್ರಕಾಶ್ ಅವರು ಬೆಳ್ಳಂ ಬೆಳಿಗ್ಗೆ ಪಟ್ಟಣದ ಪ್ರಮುಖ ರಸ್ತೆಗಳಿಗಿಳಿದು ವಾಹನ ತಪಾಸಣೆ ನಡೆಸಿ ಮಾಸ್ಕ್ಧರಿಸದ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ದಂಡ ವಿಧಿಸಿದರು. ಈ ವೇಳೆ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾತನಾಡಿ, ದೇಶಾದ್ಯಂತ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಜಾರಿಗೆ ಬಂದಿದ್ದು, ಪ್ರತಿಯೊಬ್ಬ ವಾಹನ ಸವಾರರು ತಮ್ಮ ವಾಹನದ ಮೂಲ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಒಂದು ವೇಳೆ ಛಾಯಾ ಪ್ರತಿಗಳನ್ನು ತಪಾಸಣೆ ವೇಳೆ ತೋರಿಸಿದ್ದಲ್ಲಿ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಪಟ್ಟಣದ ಪ್ರಮುಖ ವೃತ್ತಗಳಾದ ಪ್ರವಾಸಿ ಮಂದಿರ ವೃತ್ತ, ಇಜಾರಿ ಶಿರಸಪ್ಪ ವೃತ್ತ, ಕೊಟ್ಟೂರು ರಸ್ತೆ, ಹರಿಹರ ರಸ್ತೆಗಳಲ್ಲಿ ಪೊಲೀಸ್ ಅಧಿಕಾರಿಗಳು ವಾಹನ ತಪಾಸಣೆ, ಮತ್ತು ಮಾಸ್ಕ್ ಧರಿಸದ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ದಂಡ ವಿಧಿಸಿದರು. ಪೊಲೀಸ್ ಸಿಬ್ಬಂದಿಗಳಾದ ಕೂಲಹಳ್ಳಿ ಕೊಟ್ರೇಶ್, ಎಂ.ಮಲ್ಲೇಶ್ನಾಯ್ಕ, ರಾಮಚಂದ್ರಪ್ಪ, ವಾಸುದೇವನಾಯ್ಕ, ಬಿ.ಕೊಟ್ರೇಶ್ ಇದ್ದರು.