ಹರಿಹರ, ಜೂ.24- ಕೊರೊನಾ ವಾರಿಯರ್ಸ್ ಆಶಾ ಕಾರ್ಯ ಕರ್ತೆಯರಿಗೆ ನೀಡುತ್ತಿರುವ ಪ್ರೋತ್ಸಾಹ ಧನದಂತೆ ವೈದ್ಯರು, ಪೊಲೀಸ್ ಅಧಿಕಾರಿಗಳಿಗೆ ನೀಡುವಂತೆ ಶಾಸಕ ಎಸ್. ರಾಮಪ್ಪ ಸಲಹೆ ನೀಡಿದರು.
ನಗರದ ಗುರು ಭವನದಲ್ಲಿ ಜಿಲ್ಲಾ ಆಡ ಳಿತ, ಸಹಕಾರ ಇಲಾಖೆ ಹಾಗೂ ಜಿಲ್ಲೆಯ ಸಹ ಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ಇಂದು ಏರ್ಪಾಡಾಗಿದ್ದ ಕೊರೊನಾ ವಾರಿಯರ್ಸ್ ಆಶಾ ಕಾರ್ಯಕರ್ತೆಯರಿಗೆ ಸಹಾಯ ಧನದ ಚೆಕ್ ವಿತರಣಾ ಸಮಾರಂಭದ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಆಶಾ ಕಾರ್ಯಕರ್ತೆಯರಿಗೆ ನೀಡುತ್ತಿ ರುವ ಗೌರವ ತುಂಬಾ ಉತ್ತಮವಾಗಿದ್ದು, ಅವರುಗಳನ್ನು ಎಲ್ಲರೂ ಗೌರವಿಸಬೇಕು. ಇದರಿಂದಾಗಿ ಅವರಿಗೆ ಆತ್ಮಸ್ಥೈರ್ಯ ತುಂಬಿದಂತಾಗುತ್ತದೆ ಮತ್ತು ಅವರಿಗೆ ಸ್ಫೂರ್ತಿ ತುಂಬಿದಂತಾಗುತ್ತದೆ ಎಂದು ಹೇಳಿದರು.
ಈ ತಾಲ್ಲೂಕಿನ ಎಲ್ಲಾ ಆಶಾ ಕಾರ್ಯ ಕರ್ತೆಯರಿಗೆ ಉತ್ತಮವಾದ ಎನ್-95 ಮಾಸ್ಕ್ ಮತ್ತು ಕೈಗಳಿಗೆ ಗ್ಲೌಸ್‌ಗಳನ್ನು ವಿತರಿ ಸುವಂತೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅವರಿಗೆ ವಿತರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಜಿಲ್ಲೆಯಲ್ಲಿ ಬಹಳಷ್ಟು ಕೋವಿಡ್-19 ಪ್ರಕರಣಗಳು ಇದ್ದರೂ ಸಹ ನಮ್ಮ ಹರಿಹರದಲ್ಲಿ ಪ್ರಕರಣ ಇರಲಿಲ್ಲ. ಆದರೆ ಮೊನ್ನೆ ನಗರದ ಅಗಸರ ಬೀದಿಯಲ್ಲಿ 10 ಕೇಸುಗಳು ಮತ್ತು ನಿನ್ನೆ ಎ.ಕೆ. ಕಾಲೋನಿಯಲ್ಲಿ 2 ಕೇಸುಗಳು ಪತ್ತೆಯಾಗಿವೆ. ಅದಕ್ಕಾಗಿ ಸಾರ್ವಜನಿಕರು ಅಧಿಕಾರಿಗಳೊಂದಿಗೆ ಸಹಕಾರ ನೀಡಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಎಚ್ಚರಿಕೆಯಿಂದ ಇರಲು ಮನವಿ ಮಾಡಿದರು.
ಈ ಸಮಯದಲ್ಲಿ ಸಿರಿಗೆರೆ ಪಿ.ಹಾಲೇಶಪ್ಪ, ಜಯಪ್ರಕಾಶ್, ವಿ.ಎಸ್.ಎಸ್.ಎನ್ ಅಧ್ಯಕ್ಷ ಜಿ.ವೀರಯ್ಯ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಆರ್.ಸಿ. ಪಾಟೀಲ್, ಹರ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಶಿವಾನಂದಪ್ಪ, ಹರಿಹರೇಶ್ವರ ಬ್ಯಾಂಕ್ ಅಧ್ಯಕ್ಷ ಕೆ. ಅಣ್ಣಪ್ಪ, ಹನಗವಾಡಿ ಬಣಕಾರ ಜಗದೀಶಪ್ಪ, ಬೆಳ್ಳೂಡಿ ರಾಮ ಚಂದ್ರಪ್ಪ, ಸಹಕಾರಿ ಅಧಿಕಾರಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಮೋಹನ್ ಮತ್ತಿತರರು ಉಪಸ್ಥಿತರಿದ್ದರು.