ದಾವಣಗೆರೆ, ಜೂ.23- ಭೂಮಿಯ ಮೇಲಿರುವ ಜೀವಿಗಳಿಗೆ ಪರಿಸರವೇ ಜೀವಾಳ. ಪರಿಸರ ದಿನಾಚರಣೆಯಂದು ಮಾತ್ರ ಗಿಡ ನೆಡುವುದಕ್ಕೆ ಸೀಮಿತವಾಗಬಾರದು. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ದೊರಕಬೇಕೆಂದರೆ ನಾವೆಲ್ಲಾ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಕರೆ ನೀಡಿದರು.
ಪೀಠದ ಆವರಣದಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ಪಂಚಮಸಾಲಿ ಮಹಿಳಾ ಘಟಕದಿಂದ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಮರಗಳು ನಮ್ಮ ಪ್ರತಿರೂಪ ಎಂದು ಸುಭಾಷ್ ಚಂದ್ರ ಬೋಸ್ ಹೇಳಿದ್ದಾರೆ. ವಿಶ್ವ ಪರಿಸರ ದಿನ ಎಂದಾಕ್ಷಣ ನೆನಪಿಗೆ ಬರುವುದು ಸಾಲುಮರದ ತಿಮ್ಮಕ್ಕ. ಪ್ರಕೃತಿಗೆ ನಾವು ಏನು ಕೊಡುತ್ತೇವೆಯೋ ಅದಕ್ಕಿಂತ ದುಪ್ಪಟ್ಟು ನಮಗೆ ಪ್ರಕೃತಿ ಕೊಡುತ್ತದೆ ಎಂದರು.
ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ, ಜಿಲ್ಲಾ ಘಟಕದ ಉಪಾಧ್ಯಕ್ಷ ಬಿ. ಲೋಕೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಸಿ. ಕಾಶೀನಾಥ್, ಜಿಲ್ಲಾ ಮಹಿಳಾ ಘಟಕಾಧ್ಯಕ್ಷೆ ರಶ್ಮಿ ನಾಗರಾಜ್ ಕುಂಕೋದ್, ನಗರ ಮಹಿಳಾ ಘಟಕಾಧ್ಯಕ್ಷೆ ವಾಣಿ ಗುರು, ನಗರ ಮಹಿಳಾ ಘಟಕ ಕಾರ್ಯದರ್ಶಿ ಶಶಿಕಲಾ ಶಿವಲಿಂಗಪ್ಪ, ಜಿಲ್ಲಾ ಯುವ ಘಟಕಾಧ್ಯಕ್ಷ ಕೆ. ಶಿವಕುಮಾರ್, ನಗರ ಘಟಕದ ಅಧ್ಯಕ್ಷ ಕೈದಾಳೆ ಶಿವಶಂಕರ್, ಗೌರಮ್ಮ ಐಗೂರು, ನಾಗವೇಣಿ, ಎಸ್.ಎನ್. ಚಂದ್ರಶೇಖರ್ ನೂಲ, ಸ್ವರೂಪ್ ಅಂಗಡಿ, ನಗರ ಯುವ ಘಟಕದ ಅಧ್ಯಕ್ಷ ಬಾದಾಮಿ ಜಯಣ್ಣ ಉಪಸ್ಥಿತರಿದ್ದರು.