ಜಗಳೂರು ಪಟ್ಟಣ ಪಂಚಾಯ್ತಿಯಿಂದ ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಣೆ

ಜಗಳೂರು, ಜೂ. 23- ವಿಕಲಚೇತನರಿಗೆ ತ್ರಿಚಕ್ರ ವಾಹನಗಳನ್ನು ನೀಡುವುದರಿಂದ ಅವರ ಬಾಳಿಗೆ ಆಸರೆಯಾಗಲಿದ್ದು, ಒಂದೆಡೆಯಿಂದ ಮತ್ತೊಂ ದೆಡೆಗೆ ಸಂಚರಿಸಲು ಸಹಕಾ ರಿಯಾಗಲಿದೆ. ವಾಹನವನ್ನು ಸುರಕ್ಷಿತವಾಗಿಟ್ಟುಕೊಳ್ಳ ಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸಲಹೆ ನೀಡಿದರು. ಪಟ್ಟಣದ ತರಳಬಾಳು ಸಮುದಾಯ ಭವನದ ಮುಂಭಾಗದಲ್ಲಿ ಪಪಂ ವತಿಯಿಂದ ಎಸ್‌ಎಫ್‍ಸಿ ಮತ್ತು ಪಪಂ ಸಾಮಾನ್ಯ ನಿಧಿಯಡಿ ಶೇ.5 ರಷ್ಟು ಕಾಯ್ದಿರಿಸಿದ್ದ 6.33 ಲಕ್ಷ ಅನುದಾನದಲ್ಲಿ ಶೇ.75ರಷ್ಟು ಅಂಗವಿಕಲತೆ ಉಳ್ಳವರಿಗೆ 9 ತ್ರಿಚಕ್ರ ವಾಹನಗಳನ್ನು ವಿತರಿಸಿ ಅವರು ಮಾತನಾಡಿದರು. 

ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ಪ್ರತಿ ವರ್ಷ ಎಸ್‍ಎಫ್‍ಸಿ ಯೋಜನೆಯಡಿ ಅಂಗವಿಕಲರಿಗೆ 3 ಗಾಲಿಯ ವಾಹನಗಳನ್ನು ವಿತರಿಸಲಾಗುತ್ತಿದ್ದು, ಶೇ.75ರಷ್ಟು ಅಂಗ ವೈಕಲ್ಯವುಳ್ಳವರು ಇದರ ಸದುಪಯೋಗ ಪಡೆದುಕೂಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಕೋಶಾಧಿಕಾರಿ ನಜ್ಮಾ, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ಪ.ಪಂ. ಮುಖ್ಯಾಧಿಕಾರಿ ರಾಜು ಡಿ.ಬಣಕಾರ್, ಪ.ಪಂ. ಸದಸ್ಯ ದೇವರಾಜ್, ಸುನಿಲ್‍ಕುಮಾರ್, ಆರ್. ತಿಪ್ಪೇ ಸ್ವಾಮಿ, ಬಿಜೆಪಿ ಮಂಡಲ ಅಧ್ಯಕ್ಷ ಮಹೇಶ್, ಡಿವಿ. ನಾಗಪ್ಪ, ಸೊಕ್ಕೆ ನಾಗರಾಜ್ ಸೇರಿದಂತೆ ಮತ್ತಿತರರು ಹಾಜರಿದ್ದರು.

error: Content is protected !!