ದಾವಣಗೆರೆ, ಜೂ.21- ಪರಿಸರ ಉಳಿವಿಕೆಗಾಗಿ ಮತ್ತು ನಿಸರ್ಗದ ಪ್ರೀತಿಗಾಗಿ ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್ ವತಿಯಿಂದ ಪರಿಸರ ದಿನಾಚರಣೆಯ ಪ್ರಯುಕ್ತ `ಗಿಡ ನೆಡಿ ಬಹುಮಾನ ಗೆಲ್ಲಿ’ ಸ್ಪರ್ಧೆಯ ವಿಜೇತರ ಘೋಷಣೆ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮವನ್ನು ನಡೆಸಲಾಯಿತು.
ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಲಕ್ಷ್ಮಿಕಾಂತ್ ಬೊಮ್ಮನ್ನವರ್ ಅವರು ವಿಜೇತರಿಗೆ ಬಹುಮಾನ ವಿತರಿಸಿದರು.
ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್ ಮಾಲೀಕ ಬಿ.ಎಸ್. ಮುನಾಲ್ ಮಾತನಾಡಿ, ಹಸಿರೇ ಉಸಿರು ಎನ್ನುವ ಉದ್ದೇಶದಿಂದ ಪರಿಸರ ದಿನವನ್ನು ಆಚರಿಸಲಾಗುತ್ತಿದ್ದು, ನಮ್ಮನ್ನು ನಾವು ಉಳಿಸಿಕೊಳ್ಳಲು ಪರಿಸರ ಬೆಳೆಸುವುದು ಅತ್ಯಾವಶ್ಯಕವಾಗಿದೆ.
ಸಾಕಷ್ಟು ಗಿಡ ಮರಗಳನ್ನು ಬೆಳೆಸುವುದರೊಂದಿಗೆ ಅದರ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂದರು. ಈ ಸಂದರ್ಭದಲ್ಲಿ ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್ ಮಾಲೀಕರಾದ ಶ್ರೀಮತಿ ದೀಪಾ ಶಿವಕುಮಾರ್, ಗ್ರಾಹಕರು, ವಿಜೇತರಾದ ಶ್ವೇತಾ, ಕುಮಾರಸ್ವಾಮಿ ಸಾಲಿಮಠ, ಸುರೇಶ ಶಿರನಹಳ್ಳಿ, ಕೆ.ಎಂ. ಪ್ರೀತಿಕುಮಾರ ಮತ್ತಿತರರು ಉಪಸ್ಥಿತರಿದ್ದರು.