ಆಶಾ ಕಾರ್ಯಕರ್ತೆಯರಿಗೆ ಸಹಕಾರ ಯೂನಿಯನ್‌ ಪ್ರೋತ್ಸಾಹ ಧನ

ದಾವಣಗೆರೆ, ಜೂ.16- ನಗರದ ಜನತಾ ಬಜಾರ್‌ ಸಭಾಂಗಣದಲ್ಲಿ  ಜಿಲ್ಲಾ ಸಹಕಾರ ಯೂನಿಯನ್‌ ವತಿಯಿಂದ 10 ಜನ ಆಶಾ ಕಾರ್ಯಕರ್ತೆಯರಿಗೆ ತಲಾ 3,000 ರೂ.ಗಳ ಚೆಕ್‌ ವಿತರಣೆ ಮಾಡಲಾಯಿತು. 

ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷರೂ, ಜನತಾ ಬಜಾರ್ ಅಧ್ಯಕ್ಷರೂ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ನಿರ್ದೇಶಕ ಬಿ.ವಿ. ಚಂದ್ರಶೇಖರ್‌ ವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿ.ವಿ. ಚಂದ್ರಶೇಖರ್‌ ಅವರು, ಜಿಲ್ಲೆಯಲ್ಲಿ ಕೊರೊನಾ ಹೆಮ್ಮಾರಿಯ ಬಗ್ಗೆ ಮನೆ ಮನೆಗೆ ತೆರಳಿ ಜನರಿಗೆ ತಿಳುವಳಿಕೆ ನೀಡುತ್ತಿರುವ ಆಶಾ ಕಾರ್ಯಕರ್ತೆಯರ ಶ್ರಮ ಅಪಾರವಾಗಿದೆ ಎಂದು ಪ್ರಶಂಸಿಸಿದರು.

ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಸಹಕಾರಿ ಸಚಿವರ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ಜನತಾ ಬಜಾರ್‌ ವತಿಯಿಂದ 20 ಜನ ಆಶಾ ಕಾರ್ಯಕರ್ತೆಯರಿಗೆ ತಲಾ 3,000 ರೂ ಚೆಕ್‌ ವಿತರಿಸಲಾಯಿತು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸಹಕಾರ ಯೂನಿಯನ್‌ ನಿರ್ದೇಶಕರೂ, ದಾವಣಗೆರೆ-ಹರಿಹರ ಅರ್ಬನ್‌ ಬ್ಯಾಂಕ್ ಅಧ್ಯಕ್ಷ ಎನ್‌.ಎಂ. ಮುರುಗೇಶ್‌ ಅವರು ಆಶಾ ಕಾರ್ಯಕರ್ತೆಯರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ಎಲ್ಲರೂ ಮಾಡಬೇಕಾಗಿದೆ ಎಂದು ಆಶಿಸಿದರು.

ಜಿಲ್ಲಾ ಸಹಕಾರ ಯೂನಿಯನ್ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಹೆಚ್‌. ಸಂತೋಷ್‌ ಕುಮಾರ್ ಸ್ವಾಗತಿಸಿದರು. 

ಕಾರ್ಯಕ್ರಮವನ್ನು ಜಿಲ್ಲಾ ಸಹಕಾರ ಯೂನಿಯನ್‌ ವ್ಯವಸ್ಥಾಪಕ ಕೆ.ಎಂ. ಜಗದೀಶ್‌ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಸಹಕಾರ ಸಂಘಗಳ ಉಪನಿಬಂಧಕ ಬಿ. ಜಯಪ್ರಕಾಶ್‌, ಜಿಲ್ಲಾ ಸಹಕಾರ ಯೂನಿಯ್‌ ಉಪಾಧ್ಯಕ್ಷ ಹೆಚ್‌. ಬಸವರಾಜಪ್ಪ, ನಿರ್ದೇಶಕ ಜೆ.ಆರ್‌. ಷಣ್ಮುಖಪ್ಪ, ಎಸ್‌.ಬಿ. ಶಿವಕುಮಾರ್, ಸಿರಿಗೆರೆ ರಾಜಣ್ಣ, ಟಿ. ರಾಜಣ್ಣ, ಡಿ.ಎಂ. ಮುರಿಗೇಂದ್ರಯ್ಯ, ಗಿಡ್ಡಳ್ಳಿ ನಾಗರಾಜ್‌, ಬಿ. ಶೇಖರಪ್ಪ, ಶ್ರೀಮತಿ ಅನ್ನಪೂರ್ಣ, ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷೆ ಬಿ.ಎಸ್‌. ಮಮತಾ, ನಿರ್ದೇಶಕರಾದ ಪಿ.ಎಸ್‌. ಹನುಮಂತಪ್ಪ, ಎಚ್‌.ಎಸ್‌. ಶಿವಸಂಗಪ್ಪ, ಬಿ.ಜಿ. ನಾಗರಾಜ್‌, ಕೆ. ಚಂದ್ರಣ್ಣ, ಕೆ.ಆರ್‌. ಗಂಗರಾಜ್, ಎಂ.ಎನ್‌. ನಾಗರಾಜ್‌, ಎ. ಅಜ್ಮಲ್‌ಖಾನ್‌, ಹೆಚ್‌. ವಿಷ್ಣುಪಂತ್‌, ಕೆ.ಎಸ್‌. ಜಯಮ್ಮ, ಕೆ.ಎಸ್‌. ನೀಲಮ್ಮ, ಬಿ.ಸಿ. ಶಿಲ್ಪ, ಪ್ರಧಾನ ವ್ಯವಸ್ಥಾಪಕ ದಕ್ಷಿಣ ಮೂರ್ತಿ, ಸಹಕಾರ ಇಲಾಖೆ ಅಧಿಕಾರಿಗಳಾದ ಜಿ.ಎಸ್‌. ಸುರೇಂದ್ರ, ಎಂ. ದಕ್ಷಿಣಮೂರ್ತಿ, ಆಶಾ, ಕಾರ್ಯಕರ್ತೆಯರ ಮೇಲ್ವಿಚಾರಕಿ ಸುರೇಖ ಮತ್ತಿತರರಿದ್ದರು.

error: Content is protected !!