ಕಾಡು ಉಳಿಸಿ, ನಾಡನ್ನು ರಕ್ಷಣೆ ಮಾಡುವ ಹೊಣೆ ಪ್ರತಿಯೊಬ್ಬರ ಜವಾಬ್ದಾರಿ

ಆನಗೋಡಿನಲ್ಲಿ ಜಿ.ಪಂ. ಸದಸ್ಯ ಕೆ.ಎಸ್. ಬಸವಂತಪ್ಪ ಕರೆ

ದಾವಣಗೆರೆ, ಜೂ.6- ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆನಗೋಡು ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಮತ್ತು ಮೈದಾನದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್.ಬಸವಂತಪ್ಪ ಅವರು ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು. 

ಕಾಡು ಉಳಿಸಿ, ನಾಡನ್ನು ರಕ್ಷಣೆ ಮಾಡುವ ಹೊಣೆ ಪ್ರತಿಯೊಬ್ಬರ ಜವಾಬ್ದಾರಿ, ರೈತರೂ ಸಹ ತಮ್ಮ ಹೊಲಗಳ ಬದುಗಳಲ್ಲಿ ಮರಗಳನ್ನು ಬೆಳೆಸುವುದರಿಂದ ಮಳೆ ಹೆಚ್ಚಾಗಿ ಕೆರೆ, ಚೆಕ್ ಡ್ಯಾಂಗಳು ತುಂಬಿ ರೈತರಿಗೆ ಅನುಕೂಲವಾಗುತ್ತದೆ.  ಆದ್ದರಿಂದ ರೈತರು ಸಹ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಬಸವಂತಪ್ಪ ತಿಳಿಸಿದರು. 

ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ರವಿಕುಮಾರ್, ಎಸ್‌ಡಿಎಂಸಿ ಅಧ್ಯಕ್ಷೆ ಚಂದ್ರಮ್ಮ, ಮುಖ್ಯೋಪಾಧ್ಯಾಯ ಲೋಕಣ್ಣ ಮಾಗೋಡು, ಶಿಕ್ಷಕರಾದ ಸೋಮಶೇಖರ್ ಮತ್ತು ನಜೀರ್, ರುದ್ರೇಶ್, ಗ್ರಾಮದ ಮುಖಂಡರಾದ ಹಾಲಮ್ಮ, ನಸರುಲ್ಲಾ, ಬಸವರಾಜಪ್ಪ, ಮಕ್ಬುಲ್ ಮತ್ತು ಇತರರು ಇದ್ದರು.

error: Content is protected !!